Asianet Suvarna News Asianet Suvarna News

ಅಮೂಲ್ಯ-ಜಗದೀಶ್ ಅದ್ದೂರಿ ಬೀಗರಕೂಟ

ನವಜೋಡಿ ಜಗದೀಶ್ ಮತ್ತು ಅಮೂಲ್ಯ ಮನೆಯಿಂದಲೇ ಬರಿಗಾಲಲ್ಲೇ ದೇವರನ್ನ ತರಲು ಬೀರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದರು. ದೇವಸ್ಥಾನದಲ್ಲಿ ಗಂಗೆ ಪೂಜೆ ಬಳಿಕ ದೇವರ ಪೂಜೆ ನಡೀತು. ಬೀರೇಶ್ವರ ದೇವಸ್ಥಾನದಿಂದ ಶುರುವಾದ ಅರಿಸೇವೆ ಉತ್ಸವದಲ್ಲಿ ಅಮೂಲ್ಯ ಮತ್ತು ಜಗದೀಶ್ ಬಟ್ಟೆ ಮೇಲೆಯೇ ಮನೆ ತನಕ ನಡೆದು ಬಂದರು.

Amulya Jagaseesh another Party
  • Facebook
  • Twitter
  • Whatsapp

ಬೆಂಗಳೂರು(ಮೇ.20): ಚೆಲುವಿನ ಬೆಡಗಿ ಅಮೂಲ್ಯ ಮದುವೆ ಸಂಭ್ರಮ ಇನ್ನೂ ಮುಗಿದಿಲ್ಲ. ಇವತ್ತು ಜಗದೀಶ್ ಮನೆಯಲ್ಲಿ ಅರಿಸೇವೆ ನಡೆಯಿತು. ನವದಂಪತಿಗಾಗಿ ತಂದೆ ರಾಮಚಂದ್ರಪ್ಪ ತಿರುಪತಿ ವೆಂಕಟರಮಣ ಪೂಜೆ ಮಾಡಿಸಿದರು. ಇನ್ನು ನಾಳೆ ಅದ್ದೂರಿ ಬೀಗರಕೂಟ ನಡೆಯಲಿದ್ದು 20 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ನವಜೋಡಿ ಜಗದೀಶ್ ಮತ್ತು ಅಮೂಲ್ಯ ಮನೆಯಿಂದಲೇ ಬರಿಗಾಲಲ್ಲೇ ದೇವರನ್ನ ತರಲು ಬೀರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದರು. ದೇವಸ್ಥಾನದಲ್ಲಿ ಗಂಗೆ ಪೂಜೆ ಬಳಿಕ ದೇವರ ಪೂಜೆ ನಡೀತು. ಬೀರೇಶ್ವರ ದೇವಸ್ಥಾನದಿಂದ ಶುರುವಾದ ಅರಿಸೇವೆ ಉತ್ಸವದಲ್ಲಿ ಅಮೂಲ್ಯ ಮತ್ತು ಜಗದೀಶ್ ಬಟ್ಟೆ ಮೇಲೆಯೇ ಮನೆ ತನಕ ನಡೆದು ಬಂದರು.

ನಾಳೆ ನಡೆಯುವ ಬೀಗರಕೂಟಕ್ಕೆ ಸುಮಾರು 15 ರಿಂದ 20 ಸಾವಿರ ಮಂದಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. ಆರ್.ಆರ್.ನಗರದ ಡಬಲ್ ರೋಡ್​ ಸಮೀಪ  ಬೃಹತ್ ಪೆಂಡಾಲ್ ಹಾಕಲಾಗಿದೆ. ವೆಜ್ ಮತ್ತು ನಾನ್​ವೆಜ್​​ ಊಟದ ವ್ಯವಸ್ಥೆ ಕೂಡ ಇದೆ. ಒಟ್ಟಿನಲ್ಲಿ ನಾಳಿನ ಬೀಗರಕೂಟದ ಜೊತೆ ಅಮೂಲ್ಯ-ಜಗದೀಶ್ ಅದ್ದೂರಿ ಕಲ್ಯಾಣಕ್ಕೆ ತೆರೆ ಬೀಳಲಿದೆ.

Follow Us:
Download App:
  • android
  • ios