ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಪಕ್ಷ ಹಾಗೂ ಕುಟುಂಬ ರಾಜಕಾರಣದ ಅಂತ್ಯಕ್ಕೆ ರಾಹುಲ್ ಗಾಂಧಿ ಕಾರಣರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರೊಹ್ತಕ್, ಹರ್ಯಾಣ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಪಕ್ಷ ಹಾಗೂ ಕುಟುಂಬ ರಾಜಕಾರಣದ ಅಂತ್ಯಕ್ಕೆ ರಾಹುಲ್ ಗಾಂಧಿ ಕಾರಣರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂದು ಗಾಂಧೀಜಿ ಹೇಳಿದ್ದರು. ಆದರೆ ಅವರದನ್ನು ಮಾಡಲಿಲ್ಲ, ಇನ್ನೊಬ್ಬ ಗಾಂಧಿ ಅದನ್ನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅಮಿತ್ ಶಾ ಹೇಳಿದ್ದಾರೆ.
ಮುಂದುವರಿದು ಬಿಜೆಪಿಯ ಸಾಧನೆಯನ್ನು ಕೊಂಡಾಡಿದ ಅಮಿತ್ ಶಾ, ಬಿಜೆಪಿ ಅಧಿಕಾರಕ್ಕೆ ಬಂದಿರುವ ಎಲ್ಲೆಡೆ ಅಭಿವೃದ್ಧಿ ನಡೆದಿದೆ. ಬಿಜೆಪಿಯು ದೇಶವನ್ನು ಕುಟುಂಬ ಹಾಗೂ ತುಷ್ಟೀಕರಣ ರಾಜಕಾರಣದಿಂದ ಮುಕ್ತಗೊಳಿಸಿದೆ. ತತ್ವ ಸಿದ್ಧಾಂತಗಳ ಮೇಲೆ ನೆಲೆ ನಿಂತಿರುವ ಪಕ್ಷದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವೆಂದು ಅವರು ಹೇಳಿದ್ದಾರೆ.
