ಬೆಂಬಲಕ್ಕಾಗಿ ಭೇಟಿ ಅಭಿಯಾನದಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಟೀಮ್ಇಂಡಿಯಾ ಮಾಜಿ ನಾಟಕ ಕಪಿಲ್ ದೇವ್ ಅವರನ್ನ ಬೇಟಿ.
ದೆಹಲಿ(ಜೂನ್.2): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಟೀಮ್ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರನ್ನ ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿಯ ಬೆಂಬಲಕ್ಕಾಗಿ ಬೇಟಿ( ಸಂಪರ್ಕ್ ಫಾರ್ ಸಮರ್ಥನ್) ಅಭಿಯಾನದಡಿ ಅಮಿತ್ ಶಾ, ದೆಹಲಿಯಲ್ಲಿರುವ ಕಪಿಲ್ ನಿವಾಸಕ್ಕೆ ಬೇಟಿ ನೀಡಿದರು. ಕಪಿಲ್ ದೇವ್ ಹಾಗೂ ಕಪಿಲ್ ಪತ್ನಿಯನ್ನ ಬೇಟಿಯಾದ ಅಮಿತ್ ಶಾ, ಮೋದಿ ಸರ್ಕಾರದ 4 ವರ್ಷದ ಸಾಧನೆಯನ್ನ ವಿವರಿಸಿದರು. ಬೇಟಿ ಬಳಿಕ ಅಮಿತ್ ಶಾ ತಮ್ಮ ಸಂತಸವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬೆಂಬಲಕ್ಕಾಗಿ ಬೇಟಿ ಅಭಿಯಾನದಡಿ ಅಮಿತ್ ಶಾ ಕನಿಷ್ಠ 50 ಗಣ್ಯರನ್ನ ಬೇಟಿಯಾಗಿ ಮೋದಿ ಸರ್ಕಾರದ ಸಾಧನೆಯನ್ನ ವಿವರಿಸಲಿದ್ದಾರೆ. ಇದೇ ಕಾರ್ಯಕ್ರಮದಡಿ ಇತ್ತೀಚೆಗೆ ಅಮಿತ್ ಶಾ ಭಾರತೀಯ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರನ್ನ ಬೇಟಿಯಾಗಿದ್ದರು.ಇದೇ ವೇಳೆ ಭಾರತೀಯ ಸೇನೆಗೆ ಮೋದಿ ಸರ್ಕಾರದ ಕೊಡುಗೆಯನ್ನ ವಿವರಿಸಿದ್ದರು. ಜೊತೆಗೆ ಸೇನೆಯ ಸುಧಾರಣೆಗೆ ದಲ್ಬೀರ್ ಅವರಲ್ಲಿ ಸಲಹೆ ಪಡೆದಿದ್ದರು.
