ತಮಿಳುನಾಡಿನಲ್ಲಿ ಸದ್ಯ ಬಿಜೆಪಿ ದುರ್ಬಲವಾಗಿದೆ. ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳನ್ನು ಜನರ ಗಮನಕ್ಕೆ ತರುವ ಮೂಲಕ ನಾವು ತಮಿಳುನಾಡಲ್ಲಿ ಪಕ್ಷ ಬಲವರ್ದನೆ ಮಾಡುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅಮಿತ್ ಶಾ, ತಮಿಳುನಾಡಿನಲ್ಲಿ ಸದ್ಯ ಬಿಜೆಪಿ ದುರ್ಬಲವಾಗಿದೆ. ಕೇಂದ್ರ ಸರ್ಕಾರ ಕೈಗೊಂಡ ವಿವಿಧ ಕ್ರಮಗಳನ್ನು ಜನರ ಗಮನಕ್ಕೆ ತರುವ ಮೂಲಕ ನಾವು ತಮಿಳುನಾಡಲ್ಲಿ ಪಕ್ಷ ಬಲವರ್ದನೆ ಮಾಡುತ್ತೇವೆ. ನಾವು ಎಲ್ಲಾ ಒಳ್ಳೆಯ ವ್ಯಕ್ತಿಗಳನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ. ಅದೇ ರೀತಿ ರಜನೀಕಾಂತ್‌ರನ್ನು ಕೂಡಾ. ಆದರೆ ಬಿಜೆಪಿ ಸೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಿರುವುದು ಸ್ವತಃ ರಜನೀ ಅವರೇ ಎಂದು ಶಾ ಹೇಳಿದ್ದಾರೆ.
