ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಮುಖಂಡರ ಸಭೆ ನಡೆಸಿದ ಅಮಿತ್​ ಶಾ  ಬಿಜೆಪಿ  ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್​ ಸಿಂಹರನ್ನು ತರಾಟೆ ತೆಗೆದುಕೊಂಡಿದ್ದಾರೆ.  ಯುವ ಮೋರ್ಚಾ ಕಾರ್ಯವೈಖರಿ ಬಗ್ಗೆ  ಶಾ ವಿವರಣೆ ಕೇಳಿದ್ದಾರೆ. 

ಬೆಂಗಳೂರು(ಆ.13): ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಿನ್ನೆ ರಾಜ್ಯ ಬಿಜೆಪಿ ನಾಯಕರಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಖಾಸಗಿ ಹೋಟೆಲ್'ನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಿದ್ದ ರಾಜ್ಯ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗೈಯುತ್ತ ಚಾಟಿ ಬೀಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ ದಾಳಿ ನಡೆದಾಗ ರಾಜ್ಯದಲ್ಲಿ ಇದ್ದು ನೀವು ಏನು ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ .

ಇನ್ನು ಇದೇ ಸಂದರ್ಭದಲ್ಲಿ ಪದಾಧಿಕಾರಿಗಳು ಹಾಗೂ ವಿವಿಧ ಮೋರ್ಚಾಗಳ ಮುಖಂಡರ ಸಭೆ ನಡೆಸಿದ ಅಮಿತ್​ ಶಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್​ ಸಿಂಹರನ್ನು ತರಾಟೆ ತೆಗೆದುಕೊಂಡಿದ್ದಾರೆ. ಯುವ ಮೋರ್ಚಾ ಕಾರ್ಯವೈಖರಿ ಬಗ್ಗೆ ಶಾ ವಿವರಣೆ ಕೇಳಿದ್ದಾರೆ. 

ಇದಕ್ಕೆ ಉತ್ತರಿಸಿದ ಪ್ರತಾಪ್​ ಸಿಂಹ ಬೂತ್​ ಮಟ್ಟದಲ್ಲಿ ಹಾಗೂ ಮಂಡಲ ಸಮಿತಿ ರಚಿಸಿದ್ದೇವೆ ಎಂದು ಉತ್ತರಿಸಿದ್ದಾರೆ. ಪ್ರತಾಪ್​ ಸಿಂಹ ಉತ್ತರ ಕೇಳಿ ಕೆಂಡಾಮಂಡಲರಾದ ಅಮಿತ್​ ಶಾ , ಯುವ ಮೋರ್ಚಾ ನಡೆಸುತ್ತಿದ್ದೀರಾ? ಇಲ್ಲ ಆಶ್ರಮ ನಡೆಸುತ್ತಿದ್ದೀರಾ? ಎಂದು ಸಂಸದ ಪ್ರತಾಪ್​ ಸಿಂಹಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.