ಚೆನ್ನೈ (ಫೆ.13): ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ನಡುವಿನ ಕುರ್ಚಿಗಾಗಿ ಕಿತ್ತಾಟದ ಚೆಂಡು ಸದ್ಯ ರಾಜಭವನದ ಅಂಗಳಕ್ಕೆ ತಲುಪಿದೆ. ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವತ್ತ ಎಲ್ಲರ ಚಿತ್ತ ನೆಟ್ಟಿದೆ.

ಚೆನ್ನೈ (ಫೆ.13): ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ನಡುವಿನ ಕುರ್ಚಿಗಾಗಿ ಕಿತ್ತಾಟದ ಚೆಂಡು ಸದ್ಯ ರಾಜಭವನದ ಅಂಗಳಕ್ಕೆ ತಲುಪಿದೆ. ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವತ್ತ ಎಲ್ಲರ ಚಿತ್ತ ನೆಟ್ಟಿದೆ. ಸುಮಾರು ಶಾಸಕರು, ಸಂಸದರು ಪನ್ನೀರ್ ಸೆಲ್ವಂ ಪಾಳಯದಲ್ಲಿದ್ದಾರೆ.

ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ನಡುವಿನ ಕಿತ್ತಾಟ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ವಾರದೊಳಗೆ ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆದು ವಿಶ್ವಾಸಮತ ಯಾಚನೆಯನ್ನು ಮಾಡಿ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಗೆ ಸಲಹೆ ನೀಡಿದ್ದಾರೆ.

1998 ರಲ್ಲಿ ಉತ್ತರ ಪ್ರದೇಶದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಜಗದಾಂಬಿಕ ಪಾಲ್ ಮತ್ತು ಕಲ್ಯಾಣ್ ಸಿಂಗ್ ನಡುವೆ ಇದೇ ರೀತಿ ರಾಜಕೀಯ ಬಿಕ್ಕಟ್ಟು ಏರ್ಪಟ್ಟಾಗ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ, ವಿಧಾನಸಭೆಗೆ ವಿಶ್ವಾಸಮತ ಯಾಚನೆ ನಡೆಸುವಂತೆ ಆದೇಶಿಸಿತ್ತು ಎಂದು ಮುಕುಲ್ ರೋಹಟ್ಗಿ ಉದಾಹರಣೆ ನೀಡಿದರು.