ಅಮೇಥಿ[ಮಾ. 05]  ಕಾಂಗ್ರೆಸ್ ರಾಹುಲ್ ಗಾಂಧಿ ಅವರ ಕ್ಷೇತ್ರ ಅಮೇಥಿಯಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಬಡ ರೋಗಿಯೊಬ್ಬರಿಗೆ ಚಿಕಿತ್ಸೆ ನಿರಾಕರಣೆ ಮಾಡಲಾಗಿದ್ದು ರೋಗಿ ಸಾವನ್ನಪ್ಪಿದ್ದಾನೆ.

ಜಿಲ್ಲೆಯಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಲಾಗಿದೆ. ರೋಗಿ ಬಳಿ ಕೇಂದ್ರ ಸರ್ಕಾರ ಕೊಡಮಾಡಿದ್ದ ಆಯುಷ್ಮಾನ್ ಭಾರತ್ ಯೋಜನೆಯ ಕಾರ್ಡ್ ಇತ್ತು. ಆದರೆ ಅಲ್ಲಿನ ವೈದ್ಯರು ಈ ಆಸ್ಪತ್ರೆ ರಾಹುಲ್ ಗಾಂಧಿ ಅವರದ್ದು, ಪಿಎಂ ಮೋದಿ ಅಥವಾ ಸಿಎಂ ಯೋಗಿ ಅವರದ್ದಲ್ಲ, ಕಾರ್ಡ್ ಇಲ್ಲಿ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.

ಆಯುಷ್ಮಾನ್ ಭಾರತ ಯೋಜನೆಯ ಸಂಪೂರ್ಣ ವಿವರ

ಈ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿ ನೊಂದ ಕುಟುಂಬದ ಕಣ್ಣೀರನ್ನು ಹಂಚಿಕೊಂಡಿದ್ದಾರೆ. ಮೋದಿ ಸರಕಾರದ ಆಯುಷ್ಮಾನ್ ಭಾರತ್ ಕಾರ್ಡ್ ಇದ್ದ ಕಾರಣಕ್ಕೆ ಒಬ್ಬ ಬಡವನನ್ನು ಸಾಯಲು ಬಿಡುತ್ತಾರೆ ಎಂದು ನಾವು ಯಾವ ಕಾಲದಲ್ಲಿಯೂ ಯೋಚನೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.