Asianet Suvarna News Asianet Suvarna News

ಮತಾಂತರಕ್ಕೆ ಬಂದವ ಆದಿವಾಸಿ ಬಾಣಕ್ಕೆ ಬಲಿ

ದ್ವೀಪವೊಂದರ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೋಗಿದ್ದ ಅಮೆರಿಕ ಪ್ರಜೆಗೆ ಬುಡಕಟ್ಟು ಜನರು ಬಿಲ್ಲು- ಬಾಣಗಳಿಂದ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಅಂಡಮಾನ್‌- ನಿಕೋಬಾರ್‌ನಲ್ಲಿ ಸಂಭವಿಸಿದೆ.

American killed on Andaman island
Author
Bengaluru, First Published Nov 22, 2018, 7:15 AM IST

ಪೋರ್ಟ್‌ಬ್ಲೇರ್‌: ಬಾಹ್ಯ ಜಗತ್ತಿನ ಸಂಪರ್ಕಕ್ಕೇ ಬಾರದೇ ಜೀವಿಸುತ್ತಿರುವ ದ್ವೀಪವೊಂದರ ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಹೋಗಿದ್ದ ಅಮೆರಿಕ ಪ್ರಜೆಗೆ ಬುಡಕಟ್ಟು ಜನರು ಬಿಲ್ಲು- ಬಾಣಗಳಿಂದ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಅಂಡಮಾನ್‌- ನಿಕೋಬಾರ್‌ನಲ್ಲಿ ಸಂಭವಿಸಿದೆ.

27 ವರ್ಷದ ಜಾನ್‌ ಅಲ್ಲೆನ್‌ ಚಾವು ಹತ್ಯೆಗೀಡಾದ ಮತಪ್ರಚಾರಕ. ಈತನನ್ನು ಉತ್ತರ ಸೆಂಟಿನೆಲ್‌ ದ್ವೀಪಕ್ಕೆ ಕರೆದೊಯ್ದಿದ್ದ 7 ಮೀನುಗಾರರನ್ನು ಪೊಲೀಸರು ಬಂಧಿಸಿದ್ದಾರೆ. ನ.16ರಂದು ಮೀನುಗಾರರ ಜತೆ ದೋಣಿಯಲ್ಲಿ ದ್ವೀಪದ ಸನಿಹಕ್ಕೆ ಹೋಗಿದ್ದ ಜಾನ್‌, ಪುಟ್ಟದೋಣಿಯಲ್ಲಿ ಏಕಾಂಗಿಯಾಗಿ ದ್ವೀಪ ತಲುಪಿದ್ದ. ಈತನನ್ನು ನೋಡುತ್ತಲೇ ಆದಿವಾಸಿಗಳು ಏಕಾಏಕಿ ಬಿಲ್ಲುಗಳಿಂದ ದಾಳಿ ಮಾಡಿದರು. ಜಾನ್‌ಗೆ ಹಲವಾರು ಬಾಣಗಳು ಚುಚ್ಚಿಕೊಂಡವು. ಆದರೂ ಆತ ಓಡಿ ಬರದೆ, ಮುಂದೆ ಹೆಜ್ಜೆ ಹಾಕುತ್ತಾ ಹೋದ. ಜಾನ್‌ ಕುತ್ತಿಗೆಗೆ ಹಗ್ಗ ಬಿಗಿದ ಆದಿವಾಸಿಗಳು, ಆತನ ದೇಹವನ್ನು ಎಳೆದೊಯ್ದರು. ಇದನ್ನು ಕಂಡು ಮೀನುಗಾರರು ವಾಪಸ್‌ ಬಂದುಬಿಟ್ಟರು. ಮರುದಿನ ಹೋಗಿ ನೋಡಿದಾಗ ತೀರದಲ್ಲಿ ಜಾನ್‌ ದೇಹ ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಅಂಡಮಾನ್‌ನಲ್ಲಿ ಸರಿಸುಮಾರು 60 ಸಾವಿರ ವರ್ಷಗಳಿಂದ ಆದಿವಾಸಿಗಳು ವಾಸಿಸುತ್ತಿದ್ದಾರೆ. ಅವರು ಹೊರ ಜಗತ್ತಿನ ಜತೆ ಯಾವುದೇ ಸಂಪರ್ಕವಿಲ್ಲದೆ ದ್ವೀಪಗಳಲ್ಲಿ ಜೀವನ ನಡೆಸುತ್ತಿದ್ದಾರೆ. 2011ರಲ್ಲಿ ಅಂದಾಜಿಸಿದ್ದ ಪ್ರಕಾರ, ಉತ್ತರ ಸೆಂಟಿನೆಲ್‌ ದ್ವೀಪದಲ್ಲಿ 40 ಮಂದಿ ವಾಸ ಮಾಡುತ್ತಿದ್ದಾರೆ. ಅತ್ಯಂತ ಸೂಕ್ಷ್ಮ ಸಮುದಾಯಗಳು ಇರುವ ದ್ವೀಪಗಳಿಗೆ ಬೇರೆಯವರಿಗೆ ಪ್ರವೇಶವಿಲ್ಲ. ಆದರೆ ಕೆಲ ಪ್ರವಾಸಿಗರು ಮೀನುಗಾರರಿಗೆ ಹಣದ ಆಸೆ ತೋರಿಸಿ ಹೋಗುತ್ತಾರೆ. 2006ರಲ್ಲಿ ಇಬ್ಬರು ಮೀನುಗಾರರನ್ನು ಈ ಬುಡಕಟ್ಟು ಜನರು ಹತ್ಯೆ ಮಾಡಿದ್ದರು.

Follow Us:
Download App:
  • android
  • ios