ವಾಷಿಂಗ್ಟನ್‌ (ಮಾ. 09): ಒಂದೆಡೆ ತಾನು ಉಗ್ರರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಪಾಕಿಸ್ತಾನ ಹೇಳಿಕೊಳ್ಳುತ್ತಿರುವಾಗಲೇ ಪಾಕಿಸ್ತಾನದ ಮೇಲೆ ಅಮೆರಿಕ ಇನ್ನಷ್ಟುಒತ್ತಡ ಹೇರಿದೆ.

ಕಾಶ್ಮೀರಿಗಳ ಮೇಲೆ ದಾಳಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ: ಮೋದಿ

ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟಲು ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡಲು ತನ್ನ ನೆಲದಿಂದ ನಡೆಯುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ನಿರಂತರ ಮತ್ತು ಉಗ್ರರು ಮತ್ತೆಂದೂ ತಲೆ ಎತ್ತಲಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕ ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ನೀಡಿದೆ.

ಪುಲ್ವಾಮಾ ದಾಳಿ ಮತ್ತು ಜೈಷ್‌ ಎ ಮೊಹಮ್ಮದ್‌ ಉಗ್ರರ ನೆಲೆಗಳ ಮೇಲೆ ಭಾರತದ ವಾಯು ದಾಳಿ ಬಳಿಕ ಪಾಕಿಸ್ತಾನ ಜಾಗತಿಕ ಒತ್ತಡಕ್ಕೆ ಸಿಲುಕಿರುವಾಗಲೇ, ಅಮೆರಿಕ ವಿದೇಶಾಂಗ ಇಲಾಖೆ ಈ ಎಚ್ಚರಿಕೆ ನೀಡಿದೆ.