Asianet Suvarna News Asianet Suvarna News

ಇನ್ಮುಂದೆ ಅಮೆರಿಕ ದೊಡ್ಡಣ್ಣನಲ್ಲ? ಜಿ20 ಶೃಂಗದಲ್ಲಿ ಟ್ರಂಪ್'ಗೆ ಸಿಗಲಿಲ್ಲ ಗೌರವ..!

ತಮ್ಮ ಜೀವನದಲ್ಲಿ, ತಾವು ಕಂಡಿರುವ ಪ್ರಕಾರ ಇದೇ ಮೊದಲ ಬಾರಿ ಜಿ೨೦ ಸಮಾವೇಶದಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ನಾಯಕರಂತೆ ಆಗಮಿಸಲಿಲ್ಲ, ಮತ್ತು ಅವರನ್ನು ಜಾಗತಿಕ ನಾಯಕರಂತೆ ಪರಿಗಣಿಸಲಾಗಿಲ್ಲ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಡೇವಿಡ್ ಜಾರ್ಜನ್ ಹೇಳಿದ್ದಾರೆ.

america president donald trump drew less respect at g20 summit

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರೆಂದರೆ ಅವರಿಗೆ ವಿಶ್ವದ ಇತರೆ ಯಾವುದೇ ನಾಯಕರಿಗೆ ಸಿಗದ ಸ್ಥಾನಮಾನ ಎಲ್ಲೆಡೆ ಸಿಗುತ್ತದೆ. ಅವರಿದ್ದಲ್ಲಿ ಎಲ್ಲರೂ ಅವರನ್ನು ದುಂಬಿಗಳಂತೆ ಮುತ್ತಿಕೊಳ್ಳುತ್ತಾರೆ. ಎಲ್ಲಾ ದೇಶಗಳ ನಾಯಕರೂ ಗೌರವದಿಂದ ಕಾಣುತ್ತಾರೆ. ಆದರೆ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಶನಿವಾರವಷ್ಟೇ ಸಮಾಪನಗೊಂಡ ಜಿ೨೦ ಸಮಾವೇಶದಲ್ಲಿ, ಇದೇ ಮೊದಲ ಬಾರಿ ಅಮೆರಿಕದ ಅಧ್ಯಕ್ಷರಿಗೆ ಜಾಗತಿಕ ನಾಯಕರ ಮನ್ನಣೆ ಸಿಗಲಿಲ್ಲ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ತಮ್ಮ ಜೀವನದಲ್ಲಿ, ತಾವು ಕಂಡಿರುವ ಪ್ರಕಾರ ಇದೇ ಮೊದಲ ಬಾರಿ ಜಿ೨೦ ಸಮಾವೇಶದಲ್ಲಿ ಅಮೆರಿಕದ ಅಧ್ಯಕ್ಷರೊಬ್ಬರು ನಾಯಕರಂತೆ ಆಗಮಿಸಲಿಲ್ಲ, ಮತ್ತು ಅವರನ್ನು ಜಾಗತಿಕ ನಾಯಕರಂತೆ ಪರಿಗಣಿಸಲಾಗಿಲ್ಲ ಎಂದು ಹಿರಿಯ ರಾಜಕೀಯ ವಿಶ್ಲೇಷಕ ಡೇವಿಡ್ ಜಾರ್ಜನ್ ಹೇಳಿದ್ದಾರೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಎರಡೂ ಪಕ್ಷಗಳ ಆಡಳಿತಾವಧಿಯಲ್ಲಿ ವೈಟ್‌ಹೌಸ್‌ನ ಸಲಹೆಗಾರರಾಗಿದ್ದ ಡೇವಿಡ್, ಜಿ೨೦ ಸಮಾವೇಶದಲ್ಲಿ ಟ್ರಂಪ್‌ರ ಪ್ರಭಾವದ ಕುರಿತ ಟಿವಿ ಚರ್ಚೆಯೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ವಿಚಿತ್ರ ನಡವಳಿಕೆಯಿಂದ ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿರುವ ಟ್ರಂಪ್ ಅವರೇ ಈ ಎಲ್ಲಾ ಘಟನೆಗಳಿಗೆ ಕಾರಣ ಎನ್ನಲಾಗಿದೆ.

epaper.kannadaprabha.in

Follow Us:
Download App:
  • android
  • ios