ತುಮಕೂರಿನ ಪಾವಗಡದಲ್ಲಿ 16,500 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಸರ್ಕಾರ ನಿರ್ಮಾಣ ಮಾಡಿರುವ ವಿಶ್ವದ ಅತಿದೊಡ್ಡ ಸೋಲಾರ್‌ ವಿದ್ಯುತ್‌ ಉದ್ಯಾನವನದ ಬಗ್ಗೆ ಅಮೆರಿಕದ ‘ಲಾಸ್‌ ಏಂಜೆಲೀಸ್‌’ ದಿನ ಪತ್ರಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

ನವದೆಹಲಿ (ಮಾ. 22): ತುಮಕೂರಿನ ಪಾವಗಡದಲ್ಲಿ 16,500 ಕೋಟಿ ರು. ವೆಚ್ಚದಲ್ಲಿ ಕರ್ನಾಟಕ ಸರ್ಕಾರ ನಿರ್ಮಾಣ ಮಾಡಿರುವ ವಿಶ್ವದ ಅತಿದೊಡ್ಡ ಸೋಲಾರ್‌ ವಿದ್ಯುತ್‌ ಉದ್ಯಾನವನದ ಬಗ್ಗೆ ಅಮೆರಿಕದ ‘ಲಾಸ್‌ ಏಂಜೆಲೀಸ್‌’ ದಿನ ಪತ್ರಿಕೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಹಸಿರು ಹಾಸಿನ ಮೇಲೆ ಹಾಕಲಾಗಿರುವ ಲಕ್ಷಾಂತರ ಸಂಖ್ಯೆಯ ಸಿಲ್ವರ್‌ ಮತ್ತು ಬೂದು ಬಣ್ಣದ ಸೋಲಾರ್‌ ಪ್ಯಾನೆಲ್‌ಗಳು ಸೂರ್ಯನ ಕಿರಣಗಳಿಂದ ಕಂಗೊಳಿಸುತ್ತಿವೆ. ಈ ಯೋಜನೆ ಪೂರ್ಣಗೊಂಡ ಬಳಿಕ, ಪಾವಗಡ ಸೋಲಾರ್‌ ಪಾರ್ಕ್ 2000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದ್ದು, ಇದರಿಂದ 7 ಲಕ್ಷ ಮನೆಗಳಿಗೆ ವಿದ್ಯುತ್‌ ಹರಿಸಬಹುದಾಗಿದೆ. ಇಡೀ ವಿಶ್ವವೇ ಜಾಗತಿಕ ಹವಾಮಾನ ಬದಲಾವಣೆಯಂಥ ಸಮಸ್ಯೆ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ವಿದ್ಯುತ್‌ ಉತ್ಪಾದನೆಗೆ ಪರಿಸರಕ್ಕೆ ಮಾಲಿನ್ಯಕಾರಕ ಅಂಶಗಳನ್ನು ಸೂಸುವ ಕಲ್ಲಿದ್ದಲು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ, ಭಾರತ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನೆಯತ್ತ ದಾಪುಗಾಲಿಡುತ್ತಿರುವುದು ಒಂದು ಮೈಲಿಗಲ್ಲು ಎಂದು ಪತ್ರಿಕೆ ಕೊಂಡಾಡಿದೆ.