ಪ್ರಧಾನಿ ಇಂದಿರಾ ಗಾಂಧಿಯವರೇನಾದರೂ ಹಠಾತ್ ನಿಧನರಾದರೆ, ಅವರ ಸ್ಥಾನವನ್ನು ಅವರ ಪುತ್ರ ರಾಜೀವ್ ಗಾಂಧಿಯವರು ವಹಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು 1983ರಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಅಂದಾಜಿಸಿತ್ತು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ವಾಷಿಂಗ್ಟನ್(ಆ.10): ಪ್ರಧಾನಿ ಇಂದಿರಾ ಗಾಂಧಿಯವರೇನಾದರೂ ಹಠಾತ್ ನಿಧನರಾದರೆ, ಅವರ ಸ್ಥಾನವನ್ನು ಅವರ ಪುತ್ರ ರಾಜೀವ್ ಗಾಂಧಿಯವರು ವಹಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು 1983ರಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಅಂದಾಜಿಸಿತ್ತು ಎಂಬ ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ರಾಜೀವ್, ಇಂದಿರಾರ ಉತ್ತರಾಧಿಕಾರಿಯಾಗುವುದು ಅನುಮಾನ. ಅವರು ರಾಜಕೀಯವಾಗಿ ಅಪ್ರಬುದ್ಧರು ಮತ್ತು ಪಕ್ಷ ಅಥವಾ ಜನರನ್ನು ಆಕರ್ಷಿಸುವಲ್ಲಿ ವಿಲರಾಗುವ ಸಾಧ್ಯತೆಯಿದೆ ಎಂದು ಸಿಐಎ ಪ್ರತಿಪಾದಿಸಿತ್ತು ಎಂಬ ಮಾಹಿತಿ ಅಮೆರಿಕ ಸರ್ಕಾರ ಬಹಿರಂಗಪಡಿಸಿರುವ ರಹಸ್ಯ ಮಾಹಿತಿಯೊಂದರಿಂದ ಬಹಿರಂಗವಾಗಿದೆ.

ಅಚ್ಚರಿಯ ವಿಷಯವೆಂದರೆ, ಇಂಥದ್ದೊಂದು ವಿಶ್ಲೇಷಣೆಯ ಒಂದು ವರ್ಷದಲ್ಲೇ ಇಂದಿರಾ ಹಠಾತ್ ಸಾವಿಗೀಡಾಗಿದ್ದರು. ಜೊತೆಗೆ ಅಮೆರಿಕದ ಸಿಐಎ ನಿರೀಕ್ಷೆಗೆ ವಿರುದ್ಧವಾಗಿ ರಾಜೀವ್, ಇಂದಿರಾ ಗಾಂಧಿಯವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದರು. ಜೊತೆಗೆ ಬಳಿಕ ನಡೆದ ಚುನಾವಣೆಯಲ್ಲಿ ಅವರು ಅಭೂತಪೂರ್ವ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿದ್ದರು.