ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವಕ್ಕೆ ಬೆದರಿಕೆಯೊಡ್ಡಿರುವ ಉತ್ತರ ಕೊರಿಯಾವನ್ನು ‘ಭಯೋತ್ಪಾದನೆಯ ಪ್ರಾಯೋಜಿತ ರಾಷ್ಟ್ರ’ ಎಂದು ಅಮೆರಿಕ ಘೋಷಣೆ ಮಾಡಿದೆ.

ವಾಷಿಂಗ್ಟನ್: ಅಣ್ವಸ್ತ್ರ ಪರೀಕ್ಷೆ ನಡೆಸಿ ವಿಶ್ವಕ್ಕೆ ಬೆದರಿಕೆಯೊಡ್ಡಿರುವ ಉತ್ತರ ಕೊರಿಯಾವನ್ನು ‘ಭಯೋತ್ಪಾದನೆಯ ಪ್ರಾಯೋಜಿತ ರಾಷ್ಟ್ರ’ ಎಂದು ಅಮೆರಿಕ ಘೋಷಣೆ ಮಾಡಿದೆ.

ಶ್ವೇತ ಭವನದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಉತ್ತರ ಕೊರಿಯಾ ಕ್ಕೆ ಉಗ್ರ ಪ್ರಾಯೋಜಿತ ರಾಷ್ಟ್ರ ಎಂಬ ಹಣೆ ಪಟ್ಟಿ ಯನ್ನು ಈ ಹಿಂದೆಯೇ ಕಟ್ಟಬೇಕಿತ್ತು. ಇದೀಗ ಅದು ಕೈಗೂಡಿದೆ,’ ಎಂದು ಹೇಳಿದ್ದಾರೆ.

ಅಮೆರಿಕದ ಈ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಕೊರಿಯಾ ಅಣ್ವಸ್ತ್ರ ಸಂಬಂಧಿ ಯಾವುದೇ ಚಟುವಟಿಕೆ ನಡೆಸಿದರೆ, ಅದರ ವಿರುದ್ಧ ಇನ್ನಷ್ಟು ದಿಗ್ಭಂದನ ಹೇರಬಹುದಾಗಿದೆ