ಭೇಟಿಗಾಗಿ ಸಾಕಷ್ಟು ಸಮಯ ಕಾದು ಕುಳಿತಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಬರೀಷ್ ತಾವು ಮುಖ್ಯಮಂತ್ರಿಗಳ ಅಪಾಯಿಂಟ್ಮೆಂಟ್ ಪಡೆದುಕೊಂಡು ಹೋಗಿರಲಿಲ್ಲ. ಭೇಟಿ ತಡವಾಗಿದ್ದರಿಂದ ತಮಗೆ ಯಾವುದೇ ರೀತಿಯಾದ ಸಮಸ್ಯೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಬೆಂಗಳೂರು(ನ.28): ಶಾಸಕ ಅಂಬರೀಷ್ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಸಾಕಷ್ಟು ಸಮಯ ಕಾದ ಕುಳಿತಿದ್ದ ಘಟನೆ ನಡೆದಿದೆ. ಸಿಎಂ ಅವರನ್ನು ಭೇಟಿ ಮಾಡಲು ಸುಮಾರಿ 20 ನಿಮಿಷಗಳ ಕಾಲ ಕಾದು ಕುಳಿತಿದ್ದರು. ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅಂಬರೀಷ್ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಭೇಟಿಗಾಗಿ ಸಾಕಷ್ಟು ಸಮಯ ಕಾದು ಕುಳಿತಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅಂಬರೀಷ್ ತಾವು ಮುಖ್ಯಮಂತ್ರಿಗಳ ಅಪಾಯಿಂಟ್ಮೆಂಟ್ ಪಡೆದುಕೊಂಡು ಹೋಗಿರಲಿಲ್ಲ. ಭೇಟಿ ತಡವಾಗಿದ್ದರಿಂದ ತಮಗೆ ಯಾವುದೇ ರೀತಿಯಾದ ಸಮಸ್ಯೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ತಾವು ಓರ್ವ ಶಾಸಕರಾಗಿದ್ದು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಬಾರದೇ ಎಂದು ಪ್ರಶ್ನೆ ಮಾಡಿದ್ದಾರೆ.