ಭಾರತೀಯರ ಭಾವನೆಗಳಿಗೆ ಧಕ್ಕೆ ತಂದುದಕ್ಕೆ ಅಮೆಝಾನ್ ಕಂಪನಿ ಕ್ಷಮೆಯಾಚಿಸಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತದ ರಾಷ್ಟ್ರಧ್ವಜದ ಮಾದರಿಯಲ್ಲಿದ್ದ ಡೋರ್'ಮ್ಯಾಟ್'ಗಳನ್ನು ಮೇಯರ್ಸ್ ಫ್ಲ್ಯಾಗ್ ಡೋರ್'ಮ್ಯಾಟ್ ಹಾಗೂ ಎಕ್'ಎಲ್'ವೈಎಲ್ ಎಂಬ ಸಂಸ್ಥೆಗಳು ತಯಾರಿಸಿದ್ದು, ಅವುಗಳನ್ನು ಅಮೇಜಾನ್ ಕೆನಡಾ ತನ್ನ ತಾಣದಲ್ಲಿ ಮಾರಾಟಕ್ಕೆ ಅವಕಾಶ ನೀಡಿತ್ತು. ಭಾರತದ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿಯಲ್ಲಿರುವ ಈ ಡೋರ್'ಮ್ಯಾಟ್'ಗಳ ಪ್ರದರ್ಶನಕ್ಕೆ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ನವದೆಹಲಿ (ಜ.12): ರಾಷ್ಟ್ರಧ್ವಜ ಮಾದರಿಯಲ್ಲಿ ಡೋರ್’ಮ್ಯಾಟನ್ನು ಮಾರಾಟಕ್ಕಿಟ್ಟು ವಿವಾದಕ್ಕೆ ಕಾರಣವಾಗಿದ್ದ ಇ–ಕಾಮರ್ಸ್ ದೈತ್ಯ ಅಮೆಝಾನ್ ಕಂಪನಿಯು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ಕ್ಷಮೆ ಯಾಚಿಸಿದೆ.

ಭಾರತೀಯರ ಭಾವನೆಗಳಿಗೆ ಧಕ್ಕೆ ತಂದುದಕ್ಕೆ ಅಮೆಝಾನ್ ಕಂಪನಿ ಕ್ಷಮೆಯಾಚಿಸಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತದ ರಾಷ್ಟ್ರಧ್ವಜದ ಮಾದರಿಯಲ್ಲಿದ್ದ ಡೋರ್'ಮ್ಯಾಟ್'ಗಳನ್ನು ಮೇಯರ್ಸ್ ಫ್ಲ್ಯಾಗ್ ಡೋರ್'ಮ್ಯಾಟ್ ಹಾಗೂ ಎಕ್'ಎಲ್'ವೈಎಲ್ ಎಂಬ ಸಂಸ್ಥೆಗಳು ತಯಾರಿಸಿದ್ದು, ಅವುಗಳನ್ನು ಅಮೇಜಾನ್ ಕೆನಡಾ ತನ್ನ ತಾಣದಲ್ಲಿ ಮಾರಾಟಕ್ಕೆ ಅವಕಾಶ ನೀಡಿತ್ತು. ಭಾರತದ ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿಯಲ್ಲಿರುವ ಈ ಡೋರ್'ಮ್ಯಾಟ್'ಗಳ ಪ್ರದರ್ಶನಕ್ಕೆ ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯಪ್ರವೇಶದ ಬಳಿಕ ಭಾರತದ ತ್ರಿವರ್ಣಧ್ವಜ ಮಾದರಿ ವಿನ್ಯಾಸದ ಡೋರ್'ಮ್ಯಾಟ್'ಗಳ ಮಾರಾಟವನ್ನು ಅಮೇಜಾನ್ ಸಂಸ್ಥೆ ಹಿಂಪಡೆದುಕೊಂಡಿತ್ತು. ಅಮೇಜಾನ್'ನ ಯಾವುದೇ ಸಿಬ್ಬಂದಿಗೆ ಭಾರತದ ವೀಸಾ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು. ಆನ್'ಲೈನ್ ಮಾರಾಟ ಸಂಸ್ಥೆಯಾದ ಅಮೇಜಾನ್'ನ ಕೆನಡಾ ಆವೃತ್ತಿಯಲ್ಲಿ ಇಂತಹ ಡೋರ್'ಮ್ಯಾಟ್'ಗಳನ್ನು ಮಾರಾಟಕ್ಕಿಡಲಾಗಿತ್ತು.