ಸೊಂಪಾದ ಹೊಳೆಯುವ ಕೂದಲು ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಆದರೆ ಆಧುನಿಕ ಜೀವನ ಜಂಜಾಟ, ಮಾಲಿನ್ಯ, ಒತ್ತಡಗಳು ಕೂದಲು ಉದರಲು ಮುಖ್ಯ ಕಾರಣವಾಗಿರುತ್ತದೆ.

ಬೆಂಗಳೂರು(ಡಿ.26): ಸೊಂಪಾದ ಹೊಳೆಯುವ ಕೂದಲು ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಆದರೆ ಆಧುನಿಕ ಜೀವನ ಜಂಜಾಟ, ಮಾಲಿನ್ಯ, ಒತ್ತಡಗಳು ಕೂದಲು ಉದರಲು ಮುಖ್ಯ ಕಾರಣವಾಗಿರುತ್ತದೆ.

ಆದರೆ ಇದಕ್ಕೆಲ್ಲಾ ಪರಿಹಾರವು ಇದ್ದೆ ಇರುತ್ತದೆ. ಸೊಂಪಾದ ಕೂದಲು ಬೆಳೆಯಲು ಈ ಆಹಾರಗಳು ನಿಮಗೆ ಸಹಕಾರಿಯಾಗಿರುತ್ತದೆ.

ಮೊಟ್ಟೆ : ಮೊಟ್ಟೆಯಲ್ಲಿರುವ ಪ್ರೋಟಿನ್ ಅಂಶವು ಕೂದಲ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೊಟ್ಟೆಯು ಒಂದು ಅತ್ಯಂತ ಹೆಚ್ಚು ಪ್ರೋಟಿನ್ ಹೊಂದಿರುವ ಆಹಾರವಾಗಿದೆ.

ಬಸಳೆಹಾಗೂಇತರೆಹಸಿರುಸೊಪ್ಪುಗಳು : ಇವುಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಹೊಂದಿರುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಸಹಕಾರಿಯಾಗುತ್ತವೆ.

ಸಿಟ್ರಸ್ಅಂಶವನ್ನುಹೊಂದಿರುವಹಣ್ಣುಗಳು : ಸಿಟ್ರಸ್ ಅಂಶವನ್ನು ಹೊಂದಿರುವ ಕಿತ್ತಳೆ, ನಿಂಬೆ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ವಿಟಮಿನ್ ಸಿ ದೊರೆಯುವಂತೆ ಮಾಡುತ್ತದೆ. ನಿತ್ಯದ ಆಹಾರದಲ್ಲಿ ಇವುಗಳ ಬಳಕೆ ಕೂದಲು ಬೆಳೆಯಲು ಅನುಕೂಲಕರವಾಗಿದೆ.

ಒಮೆಗಾ - 3 ಅಂಶವನ್ನುಹೊಂದಿದಬೀಜಗಳು : ಒಮೆಗಾ - 3 ಅಂಶವನ್ನು ಹೊಂದಿರುವ ಆಹಾರಗಳು ಕೂದಲ ಸೊಂಪಾಗಿ, ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಅದರಲ್ಲಿ ವಾಲ್ನಟ್, ಮೀನು, ಬೀಜಗಳಿಂದ ದೊರೆಯುತ್ತದೆ.

ಕ್ಯಾರೆಟ್ : ಹೆಚ್ಚಿನ ವಿಟಮಿನ್ ಅಂಶ ಹೊಂದಿರುವ ಕ್ಯಾರೇಟ್ ಕೂಡ ಕೂದಲ ಬೆಳವಣೀಗೆಯಲ್ಲಿ ಸಹಕಾರಿ.