Asianet Suvarna News Asianet Suvarna News

ಬೃಂದಾವನದಲ್ಲಿ ನಡೆಯುತ್ತಿದೆ 'ಕಲಿಯುಗ ವಿಸ್ಮಯ'

ಎಲ್ಲಾ ಗ್ರಹಗಳಿಗಿಂತ ಭೂಮಿಯೇ ಅತ್ಯಂತ ಆಕರ್ಷಕವಾದ ಗ್ರಹವಾಗಿದೆ. ಇಲ್ಲಿ ಮನುಷ್ಯ ವಾಸಿಸೋದಕ್ಕೆ ಬೇಕಾದ ಪರಿಸರವಿದೆ. ಕಣ್ಣು ಕೋರೈಸುವಂಥ ವಾತಾವರಣವಿದೆ. ಅಚ್ಚ ಹಸಿರಿನ ಸಿರಿಯಿಂದ ಅತ್ಯಂತ ಅದ್ಭುತ ಎನಿಸುತ್ತಿದೆ ಈ ಜಗತ್ತು.

ನೋಡೋದಕ್ಕೆ ಇಷ್ಟೋಂದು ಸುಂದರವಾಗಿ ಕಾಣ್ಸೋ ಈ ಭೂಮಿ, ಸಾಕಷ್ಟು ನಿಗೂಢತೆಗಳನ್ನು ಹೊಂದಿದೆ. ಸಾಕಷ್ಟು ಅಚ್ಚರಿಗಳನ್ನ ಹೊಂದಿದೆ. ಸಾಕಷ್ಟು ವಿಸ್ಮಯಗಳನ್ನ ಹೊಂದಿದೆ. ತನ್ನ ಎದೆಯಾಳದಲ್ಲಿ ಹೇಳಲಾಗದಷ್ಟು ಸತ್ಯಗಳನ್ನು ಹೊಂದಿರೋ ಈ ಭೂಮಿ, ಮೇಲ್ನೋಟಕ್ಕೆ ಮಾತ್ರ ಹಸಿರಿನ ನಗೆ ಬೀರುತ್ತಿದೆ.

Amazement at Vrindavan

ಅದು ಶ್ರೀಕೃಷ್ಣನ ಸನ್ನಿಧಾನ.. ಲೋಕ ಸಾರಥಿ ಕೃಷ್ಣನ ಹೆಜ್ಜೆ ಗುರುತುಗಳು ಇನ್ನೂ ಆ ನೆಲದಲ್ಲಿವೆ. ಅದು ಪರಮ ಪವಿತ್ರ ತಾಣ ಅಂತ ಕೃಷ್ಣನ ಭಕ್ತರು ಇವತ್ತಿಗೂ ನಂಬಿದ್ದಾರೆ. ಶ್ರೀಕೃಷ್ಣನ ಜಪ ಮಾಡ್ತಾ ಆತನ ನಾಮ ಸ್ಮರಣೆಯಲ್ಲೇ ಮುಳುಗಿದ್ದಾರೆ. ಇಂಥಾ ನೆಲದಲ್ಲಿ ಒಂದು ಅಚ್ಚರಿ ನಡೀತಿದೆ. ಒಂದು ವಿಸ್ಮಯ ನಡೀತಿದೆ. ಪ್ರತಿ ದಿನ ನಾಲ್ಕು ಗಂಟೆಯಾದ್ರೆ ಸಾಕು.. ಅದೊಂದು ಪ್ರದೇಶದಲ್ಲಿ ವಿಸ್ಮಯ ಸೃಷ್ಟಿಯಾಗುತ್ತೆ.. ಅಚ್ಚರಿ ಎದುರಾಗುತ್ತೆ.. ಅಲ್ಲಿ ಅಚ್ಚರಿ ಮತ್ತು ವಿಸ್ಮಯಗಳನ್ನ ಸೃಷ್ಟಿಸ್ತಾ ಇರೋದು ಗಿಳಿಗಳು.

ಹೌದು.. ಗಿಳಿಗಳ ಆ ಅಚ್ಚರಿಯನ್ನು ಕಂಡು ಇಡೀ ಭಕ್ತ ಸಮೂಹ ಮೂಕ ವಿಸ್ಮಿತವಾಗಿದೆ. ದೇಶವೇ ಸೂಜಿಗ ಪಡ್ತಿದೆ. ಅದನ್ನ ನೋಡಿದವರೆಲ್ಲರೂ ಚಕಿತಗೊಳ್ತಿದ್ದಾರೆ. ಈ ಭೂಮಂಡಲ ಸಾಕಷ್ಟು ವಿಸ್ಮಯಗಳನ್ನ ಹೊಂದಿದೆ. ಸಾಕಷ್ಟು ಅಚ್ಚರಿಗಳನ್ನ ಹೊಂದಿದೆ. ಸಾಕಷ್ಟು ನಿಗೂಢತೆಗಳನ್ನೂ ಹೊಂದಿದೆ. ಸೂರ್ಯನ ಸುತ್ತ ಹಲವು ಗ್ರಹಗಳು ಸುತ್ತುತಾ ಇವೆ. ಆದರೆ ಅದರಲ್ಲಿ ಅಚ್ಚರಿ ಮತ್ತು ವಿಸ್ಮಯಕ್ಕೆ  ಸಾಕ್ಷಿಯಾಗಿರೋದು ಭೂ ಮಂಡಲ.

ಎಲ್ಲಾ ಗ್ರಹಗಳಿಗಿಂತ ಭೂಮಿಯೇ ಅತ್ಯಂತ ಆಕರ್ಷಕವಾದ ಗ್ರಹವಾಗಿದೆ. ಇಲ್ಲಿ ಮನುಷ್ಯ ವಾಸಿಸೋದಕ್ಕೆ ಬೇಕಾದ ಪರಿಸರವಿದೆ. ಕಣ್ಣು ಕೋರೈಸುವಂಥ ವಾತಾವರಣವಿದೆ. ಅಚ್ಚ ಹಸಿರಿನ ಸಿರಿಯಿಂದ ಅತ್ಯಂತ ಅದ್ಭುತ ಎನಿಸುತ್ತಿದೆ ಈ ಜಗತ್ತು.ನೋಡೋದಕ್ಕೆ ಇಷ್ಟೋಂದು ಸುಂದರವಾಗಿ ಕಾಣ್ಸೋ ಈ ಭೂಮಿ, ಸಾಕಷ್ಟು ನಿಗೂಢತೆಗಳನ್ನು ಹೊಂದಿದೆ. ಸಾಕಷ್ಟು ಅಚ್ಚರಿಗಳನ್ನ ಹೊಂದಿದೆ. ಸಾಕಷ್ಟು ವಿಸ್ಮಯಗಳನ್ನ ಹೊಂದಿದೆ. ತನ್ನ ಎದೆಯಾಳದಲ್ಲಿ ಹೇಳಲಾಗದಷ್ಟು ಸತ್ಯಗಳನ್ನು ಹೊಂದಿರೋ ಈ ಭೂಮಿ, ಮೇಲ್ನೋಟಕ್ಕೆ ಮಾತ್ರ ಹಸಿರಿನ ನಗೆ ಬೀರುತ್ತಿದೆ.

ಹಸುರುನ ಸಿರಿಯ ನಡುವೆ ಜಗತ್ತು ಮತ್ತಷ್ಟು ವಿಶಾಲವಾಗಿ ಬೆಳೆಯುತ್ತಿದೆ. ಪ್ರಾಕೃತಿಕ ಸೌಂದರ್ಯದ ಜೊತೆಗೆ ಸಿಮೆಂಟ್​​ ಕಟ್ಟಡಗಳು ಗಗನದೆತ್ತರಕ್ಕೆ ಬೆಳೆಯುತ್ತಿವೆ. ಹಿಂದಿನ ಇತಿಹಾಸಕ್ಕೆ ಫುಲ್​ಸ್ಟಾಪ್​ ಇಟ್ಟು, ಮುಂದಿನ ಆಲೋಚನೆಯಲ್ಲಿ ಮಗ್ನವಾಗಿದೆ ಇಡೀ ಜಗತ್ತು. ಆಧುನಿಕತೆಯ ನಡುವಲ್ಲಿ ಸಾಕಷ್ಟು ವಿಸ್ಮಯಗಳು ಅಡಗಿ ಕೂತಿವೆ ಅನ್ನೋದು ಬಹುತೇಕರಿಗೆ ಗೊತ್ತೇ ಇಲ್ಲ.

ಕಲಿಯುಗದ ಅಚ್ಚರಿಯನ್ನು ಕಂಡು ಬೆರಗಾಗಿದೆ ವಿಶ್ವ!

ನಾವೀವತ್ತು ನಿಮ್ಗೆ ಒಂದು ಅಚ್ಚರಿಯಾದ ಘಟನೆ ಬಗ್ಗೆ ಹೇಳಲೇಬೇಕು. ವಿಸ್ಮಯ ಎನ್ನುವಂತ ಅಂಶವನ್ನು ನಿಮಗೆ ತೋರಿಸಲೇಬೇಕು. ಅದನ್ನ ನೋಡಿದ್ರೆ ನೀವೇ ಶಾಕ್​ ಆಗ್ತೀರ. ಯಾಕಂದರೆ ಅದು ಕಲಿಯುಗದ ವಿಸ್ಮಯ. ಆಧುನಿಕ ಜಗತ್ತಿನ ಅಚ್ಚರಿ. ಅಂದ್ಹಾಗೆ ಆ ಅಚ್ಚರಿಯನ್ನ ಸೃಷ್ಟಿಸ್ತಾ ಇರೋದು ಮನುಷ್ಯರಲ್ಲ. ಗಿಳಿಗಳು.

ಇಲ್ಲಿ ಮರಗಳ ಮೇಲೆ ಕೂತ್ಕೊಂಡಿದ್ದಾವಲ್ಲಾ, ಇವೇ ಗಿಳಿಗಳು. ಇದೀಗ ಅಚ್ಚರಿಯನ್ನ ಸೃಷ್ಟಿಸ್ತಾ ಇವೆ. ವಿಸ್ಮಯವನ್ನು ಸೃಷ್ಟಿಸ್ತಾ ಇವೆ. ನೋಡುಗರನ್ನು ಬೆರಗುಗಿಳಿಸ್ತಾ ಇವೆ. ಈ ಗಿಳಿಗಳ ಅಚ್ಚರಿ, ಕಲಿಯುಗದ ವಿಸ್ಮಯ ಎನ್ನುವಂತೆ ಭಕ್ತರನ್ನ ಕಾಡ್ತಾ ಇದೆ. ಸಂಜೆ 3 ಗಂಟೆ 40 ನಿಮಿಷ ಆದ್ರೆ ಸಾಕು. ಎಲ್ಲೋ ಇದ್ದ ಗಿಳಿಗಳು ಓಡೋಡಿ ಬಂದು ಈ ಮರಗಳ ಮೇಲೆ ಕೂತ್ಕೊಂಡ್​ ಬಿಡ್ತವೆ.

ಒಂದು ಪಕ್ಷ ಮನುಷ್ಯರು ಲೇಟ್ ಮಾಡಬಹುದು. ಮನುಷ್ಯರು ಟೈಂ ಮೀರಬಹುದು. ಆದರೆ ಯಾವುದೇ ಕಾರಣಕ್ಕೂ ಈ ಗಿಳಿಗಳು ಟೈಂ ಬದಲಿಸಲ್ಲ. 3 ಗಂಟೆ 40 ನಿಮಿಷಕ್ಕೆ ಸರಿಯಾಗಿ ಈ ಮರಗಳ ಮೇಲೆ ಬಂದು ಕೂರುತ್ತವೆ ಹಸಿರು ಗಿಳಿಗಳು. ಅಷ್ಟೇ ಅಲ್ಲ. I ಪಕ್ಷಿಗಳು ಬರೋದನ್ನ ಕಂಡ ಕೆಲವರು ಅವುಗಳಿಗೆ ಧಾನ್ಯಗಳನ್ನ ಹಾಕ್ತಾರೆ. ಎಲ್ಲಾ ಗಿಳಿಗಳೂ ಬಂದು ಈ ಧಾನ್ಯಗಳನ್ನು ತಿನ್ನುತ್ತವೆ.

ಅಸಂಖ್ಯಾತ ಗಿಳಿಗಳು

ಇಲ್ಲಿ ಗಿಳಿಗಳು ಧಾನ್ಯಗಳನ್ನ ಹೇಗೆ ತಿಂತಾ ಇದಾವೆ ನೋಡಿ. ಒಂದಲ್ಲ ಎರಡಲ್ಲ. ಲೆಕ್ಕವಿಲ್ಲದಷ್ಟು ಅಸಂಖ್ಯಾತ ಗಿಳಿಗಳು ಇಲ್ಲಿ ಕಾಳುಗಳನ್ನ ತಿಂತಾ ಇವೆ. ಅರೆ.. ಕಾಳ್ ಹಾಕಿದ್ರೆ ಪಕ್ಷಿಗಳು ತಿಂದೇ ತಿಂತವೆ.. ಅದೇ ಥರ ಗಿಳಿಗಳೂ ಕೂಡ ಕಾಳುಗಳನ್ನ ತಿಂತಾ ಇವೆ. ಇದ್ರಲ್ಲೇನಿದೆ ಅಚ್ಚರಿ ಅಂತೀರಾ? ಹೌದು. ಇಲ್ಲೇ ಇರೋದು ಅಸಲಿ ಅಚ್ಚರಿ ಮತ್ತು ವಿಸ್ಮಯ.. ಇಲ್ಲಿ ನಿಮ್ಗೆ ಗಿಳಿಗಳನ್ನ ಬಿಟ್ಟು ಬೇರೆ ಯಾವ ಪಕ್ಷಿಗಳೂ ಬರೋದಿಲ್ಲ.

ಇದು ನಂಬೋದಕ್ಕೆ ಕಷ್ಟ ಅನ್ನಿಸಿದ್ರೂ ಸತ್ಯ.. ಇಲ್ಲಿ ಕಾಣಿಸೋ ಗಿಳಿಗಳು ನಿಜಕ್ಕೂ ಅಚ್ಚರಿಗಳ ಸಂಕೇತವಾಗಿವೆ.. ಸಾಗರೋಪಾದಿಯಾಗಿ ಬರೋ ಗಿಳಿಗಳು ಇಲ್ಲಿ ಬಿದ್ದ ಧಾನ್ಯಗಳನ್ನ ತಿನ್ನುತ್ತವೆ. ಆದರೆ ಈ ಗಿಳಿಗಳ ನಡುವೆ ಒಂದೇ ಒಂದು ಬೇರೆ ಪಕ್ಷಿ ನಿಮ್ಗೆ ಕಾಣ್ಸೋದಿಲ್ಲ. ಹಾಗಂತ ಇಲ್ಲಿ ಗಿಳಿಗಳನ್ನ ಬಿಟ್ರೆ ಬೇರೆ ಪಕ್ಷಿಗಳು ಇಲ್ಲಾ ಅಂತಲ್ಲ. ಅನೇಕ ಪಕ್ಷಿಗಳಿರುತ್ತೆ. ಆದ್ರೆ ಅವೆಲ್ಲಾ ಗಿಡಮರಗಳಲ್ಲೇ ಕೂತ್ಕೊಂಡಿರುತ್ತೆ. ಧಾನ್ಯಗಳನ್ನು ಕಂಡಾಕ್ಷಣ ಕೆಳಗಿಳಿದು ಬರೋದು ಬರೀ ಗಿಳಿಗಳು ಮಾತ್ರ.

ಇದು ಒಂದು ದಿನದ ಅಚ್ಚರಿಯಲ್ಲ. ಪ್ರತಿದಿನ ಸಂಜೆ 4 ಗಂಟೆ ಸುಮಾರಿಗೆ ಇಲ್ಲಿ ಧಾನ್ಯಗಳನ್ನ ಚೆಲ್ಲಲಾಗುತ್ತೆ. ಧಾನ್ಯಗಳನ್ನ ಚೆಲ್ಲೋದಕ್ಕೂ ಮೊದಲೇ, ಕರೆಕ್ಟ್​ ಟೈಮಿಗೆ ಗಿಳಿಗಳು ಬಂದು ಕೂರುತ್ವೆ. ಧಾನ್ಯಗಳನ್ನು ಚೆಲ್ಲಿ ಹೋದ ನಂತರ, ಎಲ್ಲಾ ಗಿಳಿಗಳು ಓಡೋಡಿ ಬಂದು ಇಲ್ಲಿ ಬಿದ್ದ ಧಾನ್ಯಗಳನ್ನ ತಿನ್ನುತ್ತವೆ. ಪ್ರತಿನಿತ್ಯ ಇಲ್ಲಿ ಇಂಥಾ ಕೆಲಸ ನಡೀತಾನೇ ಇರುತ್ತೆ. ಆದರೆ ಯಾವತ್ತೂ ಗಿಳಿಗಳ ಮಧ್ಯೆ ಬೇರೆ ಪಕ್ಷಿಗಳು ಕಾಣ್ಸಿಲ್ಲ.. ಇದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.

ಶ್ರೀಕೃಷ್ಣನ ಹೆಜ್ಜೆ ಗುರುತುಗಳಿರೋ ಬೃಂದಾವನ

ಗಿಳಿಗಳ ಈ ಅಚ್ಚರಿಯನ್ನ ಕಲಿಯುಗದ ಅಚ್ಚರಿ ಅಂತ ನಂಬಲಾಗುತ್ತಿದೆ. ಯಾಕಂದ್ರೆ ಈ ಗಿಳಿಗಳಿರೋ ನೆಲ ಸಾಕಷ್ಟು ಮಹತ್ವವನ್ನು ಹೊಂದಿರೋ ನೆಲವಾಗಿದೆ. ಸಾಕ್ಷಾತ್​ ದೇವರೇ ಕಾಲಿಟ್ಟ ಪರಮಪುಣ್ಯ ನೆಲವಾಗಿದೆ. ಇದೇ ಕಾರಣಕ್ಕೆ ಇಲ್ಲಿ ಗಿಳಿಗಳು ವಿಸ್ಮಯವನ್ನು ಸೃಷ್ಟಿಸುತ್ತಿವೆ ಅನ್ನೋ ಮಾತುಗಳೂ ಇವೆ. ಅಂದ್ಹಾಗೆ ಗಿಳಿಗಳ ವಿಸ್ಮಯಕ್ಕೆ ಕಾರಣವಾಗಿರೋ ಆ ನೆಲವಾದ್ರೂ ಯಾವುದು ಗೊತ್ತಾ? ಶ್ರೀಕೃಷ್ಣನ ಹೆಜ್ಜೆ ಗುರುತುಗಳಿರೋ ಬೃಂದಾವನ..

ಬೃಂದಾವನ. ಶ್ರೀಕೃಷ್ಣ ಆಡಿ ಬೆಳೆದ ಪರಮ ಪವಿತ್ರವಾದ ನೆಲವಿದು. ಈ ಮಣ್ಣಿನಲ್ಲಿ ಶ್ರೀಕೃಷ್ಣನ ಹೆಜ್ಜೆಗುರುತುಗಳಿವೆ. ಶ್ರೀಕೃಷ್ಣನ ಅನುಗ್ರಹ ಈ ಪ್ರದೇಶದ ಮೇಲಿದೆ. ಕಲಿಯುಗದಲ್ಲೂ ಆಗಾಗ ಶ್ರೀಕೃಷ್ಣ  ಇಲ್ಲಿಗೆ ಬಂದು ಹೋಗ್ತಾನೆ ಅನ್ನೋ ನಂಬಿಕೆ ಭಕ್ತರಿಗಿದೆ. ಬೃಂದಾವನದಲ್ಲಿ ಪಾಸಿಟಿವ್ ಎನರ್ಜಿ ಇದ್ದು, ಅದಕ್ಕೆ ಕಾರಣ ಶ್ರೀಕೃಷ್ಣನೇ ಅಂತಾರೆ ಕೃಷ್ಣನ ಭಕ್ತರು.

ಈ ನೆಲದ ಮಹಿಮೆ ಅಪಾರ. ಈ ನೆಲದ ಚರಿತ್ರೆ ಅನನ್ಯ. ಶ್ರೀಕೃಷ್ಣ ನೆಲೆಸಿದ ತಾಣ ಆಗಿದ್ರಿಂದ, ಇಲ್ಲಿ ವಿಸ್ಮಯಗಳು ಆಗಾಗ ನಡೀತಾನೇ ಇರುತ್ತಂತೆ. ಅಂಥಾ ವಿಸ್ಮಯಗಳಲ್ಲಿ ಒಂದಾಗಿದೆ ಈ ಗಿಳಿಗಳ ವಿಸ್ಮಯ.

ಪ್ರತಿ ದಿನ ಸಂಜೆ 4 ಗಂಟೆಗೆ ಸರಿಯಾಗಿ ಗಿಳಿಗಳು ಇಲ್ಲಿಗೆ ಬಂದು ಧಾನ್ಯಗಳನ್ನ ತಿನ್ನುತ್ತವೆ. ಗಿಳಿಗಳು ತಿನ್ನೋ ಟೈಮಲ್ಲಿ ಬೇರೆ ಯಾವ ಪಕ್ಷಿಗಳೂ ಇಲ್ಲಿಗೆ ಬರೋದಿಲ್ಲ. ಎಲ್ಲೂ ಬೇರೆ ಪಕ್ಷಿಗಳು ಕಾಣ್ಸೋದೂ ಇಲ್ಲ.

ಅಚ್ಚರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಕಲಿಯುಗದಲ್ಲೂ ಕೃಷ್ಣನ ಲೀಲೆಗಳು ನಡೆಯುತ್ವಾ? ಬೃಂದಾವನದಲ್ಲಿ ಈಗಲೂ ಶ್ರೀಕೃಷ್ಣ ಬಂದು ಹೋಗ್ತಾನಾ? ಆತನ ಹೆಜ್ಜೆ ಗುರುತುಗಳೂ ಈಗಲೂ ಅಲ್ಲಿ ಇದಾವಾ? ಬೃಂದಾವನದಲ್ಲಿ ನಡೀತಿರೋ ಗಿಳಿಗಳ ಅಚ್ಚರಿಗೂ, ಶ್ರೀಕೃಷ್ಣನಿಗೂ ನಂಟಿದೆಯಾ? ಇಂಥಾ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡ್ತಾ ಇರಬಹುದು. ಆದರೆ ಆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಏನು ಅಂತ ಹುಡುಕ್ತಾ ಹೊರಟಾಗ, ಅಚ್ಚರಿಯ ವಿಷಯಗಳು ಹೊರಬಿದ್ದವು.. ಆ ಅಚ್ಚರಿಯ ಅಂಶಗಳು ಏನು ಅಂತ ಕೇಳಿದ್ರೆ ನೀವೂ ಒಂದು ಕ್ಷಣ ಬೆಚ್ಚಿ ಬೀಳ್ತೀರ.

ಇಲ್ಲಿ ಇದಕ್ಕಿಂತಲೂ ಅಚ್ಚರಿಯಾದ ಇನ್ನೊಂದು ಸತ್ಯ ಇದೆ. ಇಲ್ಲಿ ವಿಸ್ಮಯ ಸೃಷ್ಟಿಸ್ತಾ ಇರೋದು ಬರೀ ಗಿಳಿಗಳು ಮಾತ್ರವಲ್ಲ.. ಪಾರಿವಾಳಗಳೂ ಇವೆ. ಇದು ನಿಜಕ್ಕೂ ನಂಬೋದಕ್ಕೆ ಆಗದೇ ಇರುವಂಥ ವಿಷ್ಯ. ಆದರೂ ನಂಬಲೇಬೇಕು. ಯಾಕಂದರೆ ಇದು ಅಕ್ಷರಶಃ ಸತ್ಯ. ಇಲ್ಲಿ ಪಾರಿವಾಳಗಳೂ ಇವೆ. ಕಾಳ್ ಹಾಕಿದಾಗ ಈ ಪಾರಿವಾಳಗೂ ಬರುತ್ತೆ. ಇಲ್ಲಿನ ಧಾನ್ಯಗಳನ್ನು ಹುಡುಕಿ ಹುಡುಕಿ ತಿನ್ನುತ್ತವೆ.

ಪಾರಿವಾಳಗಳು ಧಾನ್ಯಗಳನ್ನ ತಿನ್ನುವಾಗ ಗಿಳಿಗಳು ಬರೋದಿಲ್ಲ.. ಅಕಸ್ಮಾತ್​ ಬಂದ್ರೂ ಒಂದೋ ಎರಡೋ ಗಿಳಿಗಳು ಬರಬಹುದು. ಆದ್ರೆ ಉಳಿದ ಗಿಳಿಗಳ ಸದ್ದೇ ಇರೋದಿಲ್ಲ. ಇಲ್ಲಿ ಸದ್ದು ಮಾಡೋದು ಬರೀ ಪಾರಿವಾಳಗಳು ಮಾತ್ರ.

 ಇದು ನಿಜಕ್ಕೂ ಅಚ್ಚರಿಯಾದ ವಿಷ್ಯ. ಈ ಅಚ್ಚರಿಯನ್ನ ನೋಡಿದ ಬಹುತೇಕ ಮಂದಿ ಅಕ್ಷರಶಃ ಮೂಕವಿಸ್ಮಿತರಾಗ್ತಿದ್ದಾರೆ. ಯಾಕಂದ್ರೆ 3 ಗಂಟೆಗೆ ಒಂದ್ಸಲ ಮತ್ತು ನಾಲ್ಕು ಗಂಟೆಗೆ ಒಂದ್ಸಲ. ಇಲ್ಲಿ ಎರಡೆರಡು ಅಚ್ಚರಿಗಳು ಎದುರಾಗುತ್ತವೆ. ಆ ಅಚ್ಚರಿಗಳನ್ನು ಸೃಷ್ಟಿಸ್ತಾ ಇರೋದು ಗಿಳಿಗಳು ಮತ್ತು ಪಕ್ಷಿಗಳು.

ಮೂರು ಗಂಟೆಗೆ ಒಂದ್ಸಲ ಈ ಪ್ರದೇಶದಲ್ಲಿ ಧಾನ್ಯಗಳನ್ನ ಚೆಲ್ಲಲಾಗುತ್ತೆ. ಮೂರು ಗಂಟೆಗೆ ಹಾಕಿದ ಧಾನ್ಯಗಳನ್ನ ತಿನ್ನೋದಕ್ಕೆ ಅಂತ ಓಡೋಡಿ ಬರುತ್ತೆ ಪಾರಿವಾಳಗಳು. ಆದರೆ ಮೂರು ಗಂಟೆ ಟೈಮಲ್ಲಿ ಪಾರಿವಾಳು ಮಾತ್ರ ಬರುತ್ತೆ. ಗಿಳಿಗಳು ಅಲ್ಲೇ ಸಮೀಪದ ಗಿಡಗಳಲ್ಲಿ ಇದ್ರೂ ಬರೋದಿಲ್ಲ. ಯಾಕಂದ್ರೆ ಮೂರು ಗಂಟೆ ಟೈಮಲ್ಲಿ ಈ ಧಾನ್ಯಗಳನ್ನ ತಿನ್ನೋದು ಬರೀ ಪಾರಿವಾಳಗಳು.

ಮೂರು ಗಂಟೆಗೆ ಪಾರಿವಾಳಗಳು ಧಾನ್ಯಗಳನ್ನ ತಿಂದು ಸುಮ್ಮನಾಗುತ್ತವೆ. ಇದಾದ ನಂತರ ನಾಲ್ಕು ಗಂಟೆಗೆ ಮತ್ತೊಮ್ಮೆ ಧಾನ್ಯಗಳನ್ನ ಈ ಪ್ರದೇಶದಲ್ಲಿ ಚೆಲ್ಲಲಾಗುತ್ತೆ. ಆಗ ಪಾರಿವಾಳಗಳು ಬರೋದಿಲ್ಲ. ಆಗ ಈ ಧಾನ್ಯಗಳನ್ನ ತಿನ್ನೋದಕ್ಕೆ ಬರೋದು ಬರೀ ಗಿಳಿಗಳು ಮಾತ್ರ. ಈ ಗಿಳಿಗಳ ನಡುವೆ ಒಂದು ಸಣ್ಣ ಪಾರಿವಾಳಾನೂ ಕಾಣ್ಸೋದಿಲ್ಲ.

Amazement at Vrindavan

ಈ ಪ್ರದೇಶದಲ್ಲಿನ ಪಕ್ಷಿಗಳು ಕರೆಕ್ಟಾಗಿ ಟೈಂ ಟೇಬಲ್​ ಮೇಂಟೇನ್​ ಮಾಡುತ್ವೆ. ಮೂರು ಗಂಟೆಗೆ ಪಾರಿವಾಳಗಳ ಟೈಂ. ನಾಲ್ಕು ಗಂಟೆಗೆ ಗಿಳಿಗಳ ಟೈಂ. ಆದ್ರೆ ಈ ಟೈಂ ಟೇಬಲ್ ಫಿಕ್ಸ್​ ಮಾಡಿದ್ದು ಯಾರೂ ಅಲ್ಲ. ಇಲ್ಲಿನ ಜನ ಪಾರಿವಾಳ ಇದ್ದಾಗ ಗಿಳಿಗಳನ್ನ ಬರಬೇಡಿ ಅಂದಿಲ್ಲ. ಗಿಳಿಗಳು ಬಂದಾಗ ಪಾರಿವಾಳಗಳನ್ನ ದೂರ ತಳ್ಳಲ್ಲ. ಆದ್ರೂ ಪಾರಿವಾಳ ಮತ್ತು ಗಿಳಿಗಳು ಸಪರೇಟ್ ಸಪರೇಟಾಗಿ ಬಂದು ಧಾನ್ಯಗಳನ್ನ ತಿನ್ನುತ್ತವೆ. ಪಕ್ಷಿಗಳೇ ತಮ್ಮ ಆಹಾರದ ಸಮಯವನ್ನ ಫಿಕ್ಸ್ ಮಾಡ್ಕೊಂಡಿವೆ. ಆಯಾ ಸಮಯಕ್ಕೆ ಆಯಾ ಪಕ್ಷಿಗಳು ಪ್ರತಿ ದಿನ ತಪ್ಪದೇ ಬರುತ್ತೆ. ಮಧ್ಯಾಹ್ನ 3 ಗಂಟೆಗೆ ಪಾರಿವಾಳು ಬಂದ್ರೆ, 4 ಗಂಟೆಗೆ ಗಿಳಿಗಳು ಬರುತ್ತೆ. ಈ ಗಿಳಿಗಳ ಮಧ್ಯೆ ಒಂದು ಪಾರಿವಾಳಾನೂ ಕಾಣ್ಸೋದಿಲ್ಲ.

ಇನ್ನು ಈ ಪ್ರದೇಶವನ್ನು ಬಿಟ್ಟು ಬೇರೆ ಕಡೆ ಧಾನ್ಯಗಳನ್ನ ಹಾಕಿದ್ರೆ, ಅಲ್ಲಿ ಪಾರಿವಾಳಗಳೂ ಬರುತ್ತೆ. ಗಿಳಿಗಳೂ ಬರುತ್ತೆ.. ಎಲ್ಲಾ ಥರದ ಪಕ್ಷಿಗಳೂ ಬರುತ್ತೆ.. ಎಲ್ಲವೂ ಒಟ್ಟಿಗೆ ಆಹಾರ ಧಾನ್ಯಗಳನ್ನ ತಿನ್ನುತ್ತವೆ.

ಇಡೀ ಬೃಂದಾವನವನ್ನ ಹುಡುಕಿದ್ರೆ ಇಂಥದ್ದೇ ಸನ್ನಿವೇಷಗಳು ಕಣ್ಣಿಗೆ ಬೀಳುತ್ತೆ. ಎಲ್ಲಾ ಥರದ ಪಕ್ಷಿಗಳೂ ಒಟ್ಟಿಗೆ ಧಾನ್ಯಗಳನ್ನ ತಿನ್ನುತ್ತವೆ. ಆದ್ರೆ ಇಲ್ಲಿ ಮಾತ್ರ ಪಾರಿವಾಳಗಳಿದ್ದಾಗ ಗಿಳಿಗಳು ಬರಲ್ಲ. ಗಿಳಿಗಳು ತಿಂತಿರುವಾಗ ಪಾರಿವಾಳಗಳು ಕಾಣ್ಸೋದೇ ಇಲ್ಲ. ಅಂದ್ಹಾಗೆ ಬೃಂದಾವನದಾದ್ಯಂತ ಈ ವಿಸ್ಮಯ ನಡೆಯೋದಿಲ್ಲ.. ಈ ವಿಸ್ಮಯ ನಡೆಯೋದು ಬೃಂದಾವನದ ಒಂದು ದೇಗುಲದಲ್ಲಿ ಮಾತ್ರ.. ಆ ದೇಗುಲ ಎಲ್ಲಿ ಅಂತ ತಿಳ್ಕೋಬೇಕು ಅಂದ್ರೆ, ನೀವು ಕೃಷ್ಣ ಕಾಲಿಟ್ಟ ನೆಲಕ್ಕೆ ಅಂದ್ರೆ ಬೃಂದಾವನಕ್ಕೆ ಬರಬೇಕಾಗುತ್ತೆ.

ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 150ಕಿಲೋಮೀಟರ್​ ದೂರವಿರುವ ಬೃಂದಾವನದಲ್ಲಿ ರಾಧಾ ಟೀಲಾ ಅನ್ನೋ ಪ್ರದೇಶವಿದೆ. ಈ ಪ್ರದೇಶದಲ್ಲಿ ಶ್ರೀಕೃಷ್ಣನ ಆರಾಧನೆ ನಡೆಯುತ್ತೆ. ಇಲ್ಲೊಬ್ಬರ ಗುರೂಜೀನೂ ಇದ್ದಾರೆ. ಅವ್ರ ಹೆಸ್ರು ರಾಧಾ ಚರಣ್ ಅಂತ.

ಶ್ವೇತವರ್ಣದ ಉಡುಪನ್ನ ಧರಿಸಿ, ಮುಖಕ್ಕೆ ಚಂದನವನ್ನು ಹಚ್ಚಿಕೊಂಡು ಕೃಷ್ಣನ ಧ್ಯಾನದಲ್ಲಿ ಮಗ್ನರಾಗಿರೋ ಈ ರಾಧಾ ಚರಣ್​ ಅವ್ರೇ, ಈ ಪ್ರದೇಶದ ಮುಖ್ಯಸ್ಥರು.. ಇವರಿರೋ ಜಾಗದಲ್ಲಿ, ದೇಗುಲದ ಪಕ್ಕದಲ್ಲಿರೋ ಪಕ್ಷಿ ಸೇವಾ ಕಟ್ಟಡದ ಮೇಲ್ಭಾಗದಲ್ಲಿ ಧಾನ್ಯಗಳನ್ನ ಹಾಕೋ ಮೂಲಕ ಪಕ್ಷಿಗಳಿಗೆ ಆಹಾರ ನೀಡ್ತಾರೆ. ಆದ್ರೆ ಪಕ್ಷಿಗಳು ಆತುರಕ್ಕೆ ಬೀಳಲ್ಲ.. 3 ಗಂಟೆಗೆ ಹಾಕೋ ಧಾನ್ಯಗಳನ್ನು ಪಾರಿವಾಳು ತಿನ್ನುತ್ತವೆ.. ಮತ್ತು 4 ಗಂಟೆಗೆ ಹಾಕೋ ಧಾನ್ಯಗಳನ್ನ ಗಿಳಿಗಳು ತಿನ್ನುತ್ತವೆ,.. ಗಿಳಿಗಳು ಧಾನ್ಯಗಳನ್ನ ತಿನ್ನುವಾಗ ಬೇರೆ ಜಾತಿಯ ಒಂದು ಪಕ್ಷೀನೂ ಕಾಣ್ಸೋದಿಲ್ಲ.. ಪಕ್ಷಿಗಳ ಈ ವಿಷಯ ಇದೀಗ ಅಚ್ಚರಿ ಮತ್ತು ವಿಸ್ಮಯಕ್ಕೆ ಕಾರಣವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಿಂದ ಮೂರ್ನಾಲ್ಕು ಗಂಟೆಗಳ ಪಯಣ ಮಾಡಿದ್ರೆ, ಉತ್ತರ ಪ್ರದೇಶದಲ್ಲಿರೋ ಬೃಂದಾವನ್ನ ತಲುಪ್ತೀವಿ. ಕೃಷ್ಣನ ಹೆಜ್ಜೆ ಗುರುತುಗಳಿರೋ ಆ ನೆಲಕ್ಕೆ, ಕೋಟ್ಯಾನು ಕೋಟು ಭಕ್ತರು ಆಗಮಿಸ್ತಾರೆ. ದೇಶ ವಿದೇಶಗಳಿಂದಲೂ ಜನ ಬರ್ತಾರೆ. ಇಂಥಾ ಪ್ರದೇಶಗಳ ನಡುವಲ್ಲೇ ಪಕ್ಷಿಗಳು ಅಚ್ಚರಿಯನ್ನ ಉಂಟು ಮಾಡುತ್ತಿವೆ.

ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್

Follow Us:
Download App:
  • android
  • ios