ಬೆಂಗಳೂರು[ಜು.24]: ರಾಜ್ಯದಲ್ಲಿ ರಾಕ್ಷಸ ರಾಜಕಾರಣ ಇತಿಶ್ರೀಯಾಗಿದೆ, ಸಾತ್ವಿಕ ರಾಜಕಾರಣ ಆರಂಭವಾಗಬೇಕಿದೆ ಎಂದು ಅತೃಪ್ತ ಜೆಡಿಎಸ್‌ ಶಾಸಕ ಎಚ್‌. ವಿಶ್ವನಾಥ್‌ ಪ್ರತಿಕ್ರಿಯಿಸಿದ್ದಾರೆ.

ಮೈತ್ರಿ ಸರ್ಕಾರ ಪತನದ ನಂತರ ಪುಣೆಯಿಂದ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗಿರುವುದು ಸಂತಸ ತರಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರಲಿಲ್ಲ. ಸರ್ಕಾರ ಪತನಗೊಳ್ಳಲಿದೆ ಎಂದು ನಮಗೆ ವಿಶ್ವಾಸ ಇತ್ತು. ಅದರಂತೆ ಸರ್ಕಾರ ಪತನವಾಗಿದೆ. ನಾವು ಪಕ್ಷಾಂತರ ಮಾಡಿಲ್ಲ. ಕೇವಲ ನಾಲ್ಕು ಜನಕ್ಕೆ ಮಾತ್ರ ಸೀಮಿತವಾಗಿದ್ದ ಸರ್ಕಾರದ ಸ್ವಾರ್ಥ ರಾಜಕಾರಣದಿಂದ ಬೇಸತ್ತಿದ್ದೆವು. ಸರ್ಕಾರ ಬೀಳಲು ಸಚಿವ ಸಾ.ರಾ. ಮಹೇಶ್‌ ಅವರೇ ಕಾರಣ. ಮುಂದಿನ ನಡೆ ಬಗ್ಗೆ ಎಲ್ಲರೂ ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತೇವೆ. ಪ್ರಸ್ತುತ ಪುಣೆಯಲ್ಲಿದ್ದು, ಶೀಘ್ರ ಬೆಂಗಳೂರಿಗೆ ಬರುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ತಾವು ಪಕ್ಷಕ್ಕೆ ದ್ರೋಹ ಮಾಡಿದ್ದಾಗಿ ಹೇಳಿರುವ ಸಿದ್ದರಾಮಯ್ಯ ಅವರೇ ಜೆಡಿಎಸ್‌ಗೆ ದ್ರೋಹ ಮಾಡಿ ಕಾಂಗ್ರೆಸ್‌ ಸೇರಿದ್ದಾರೆ, ಇವರು ಸಹ ಕೈ ಕೊಟ್ಟು ಬಂದವರೇ ಆಗಿದ್ದಾರೆ ಎಂದರು.