ಅಲ್ವರ್‌(ರಾಜಸ್ಥಾನ) [ಜು.1]: ಬಿಜೆಪಿ ಸಂಸದ ಮಹಾಂತ್‌ ಬಾಲಾಕಾಂತ್‌ ಅವರಿದ್ದ ಹೆಲಿಕಾಪ್ಟರ್‌ ಟೇಕ್‌ಆಫ್‌ ಮಾಡುವ ವೇಳೆ ಪೈಲಟ್‌ನ ನಿಯಂತ್ರಣ ತಪ್ಪಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ನಡೆದಿದೆ. 

ಅಲ್ವರ್‌ ಜಿಲ್ಲೆಯ ಕೋಟ್‌ಕಾಸೀಮ್‌ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಸಂಸದರು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಲಾಕಾಂತ್‌ ಅವರು ದೇವಾಲಯಕ್ಕೆ ಭೇಟಿ ನೀಡಲೆಂದು ತೆರಳಲು ಹೆಲಿಕಾಪ್ಟರ್‌ ಏರಿ, ಟೇಕ್‌ಆಫ್‌ ಮಾಡಿದ ಕೆಲ ಕ್ಷಣದಲ್ಲೇ ಹೆಲಿಕಾಪ್ಟರ್‌ ಪೈಲಟ್‌ನ ನಿಯಂತ್ರಣ ತಪ್ಪಿ ತಿರುಗಲಾರಂಭಿಸಿದೆ. 

ನಿಯಂತ್ರಣಕ್ಕೆ ಪಡೆಯಲು ಹರಸಾಹಸ ಪಟ್ಟಪೈಲಟ್‌ ಕಡೆಗೂ ಯಶಸ್ವಿಯಾದರು. ಅದೃಷ್ಟವಶಾತ್‌ ಸಂಸದ ಬಾಲಾಕಾಂತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.