ವಿಮಾನ ಲ್ಯಾಂಡ್ ಆಗುವುದನ್ನೇ ತಡೆದ ಪ್ರಾಣಿ ಯಾವುದು?

Alligator halts plane at Orlando International Airport
Highlights

ಅದು ನಿಗದಿತ ಸಮಯಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ. ಆದರೆ ವಿಮಾನ ಇನ್ನೇನು ಕೆಳಗೆ ಇಳಿಯಬೇಕು ಅನ್ನುವಷ್ಟರಲ್ಲಿ ಪ್ರಾಣಿಯೊಂದು ವಿಮಾನ ನಿಲ್ದಾಣದಲ್ಲಿ ವಿಹರಿಸುತ್ತಿರುವುದು ಕಾಣುತ್ತದೆ. ಗಮನವಿಟ್ಟು ನೋಡಿದಾಗ ಅದೊಂದು ಮೊಸಳೆ ಎಂದು ಗೊತ್ತಾಗುತ್ತದೆ. ಹಾಗಾದರೆ ಈ ಘಟನೆ ನಡೆದದ್ದು ಎಲ್ಲಿ? ಮುಂದೆ ಓದಿ..

ಒರ್ಲಾಂಡೋ: ಅದು ನಿಗದಿತ ಸಮಯಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ. ಆದರೆ ವಿಮಾನ ಇನ್ನೇನು ಕೆಳಗೆ ಇಳಿಯಬೇಕು ಅನ್ನುವಷ್ಟರಲ್ಲಿ ಪ್ರಾಣಿಯೊಂದು ವಿಮಾನ ನಿಲ್ದಾಣದಲ್ಲಿ ವಿಹರಿಸುತ್ತಿರುವುದು ಕಾಣುತ್ತದೆ. ಗಮನವಿಟ್ಟು ನೋಡಿದಾಗ ಅದೊಂದು ಮೊಸಳೆ ಎಂದು ಗೊತ್ತಾಗುತ್ತದೆ.

ಈ ಮೊಸಳೆರಾಯನ ವಿಹಾರದಿಂದ ವಿಮಾನ ಲ್ಯಾಂಡ್ ಆಗುವುದು ವಿಳಂಬವಾಗುತ್ತದೆ. ಇನ್ನೇನು ವಿಮಾನ ಲ್ಯಾಂಡ್ ಆಗಬೇಕು ಎಂದಾಗ ಫೈಲೆಟ್ ಕಣ್ಣಿಗೆ ಮೊಸಳೆರಾಯ ಬೀಳುತ್ತಾನೆ.

ಇಂಥ ಘಟನೆಗೆ ಸಾಕ್ಷಿಯಾಗಿದ್ದು ಫ್ಲೋರಿಡಾದ ಒರ್ಲಾಂಡೋ ವಿಮಾನ ನಿಲ್ದಾಣ. ರನ್ ವೇ ತುಂಬಾ ಓಡಾಡಿಕೊಂಡಿದ್ದ ಮೊಸಳೆ ವಿಮಾನವನ್ನು ಕೆಲ ಕಾಲ ಗಾಳಿಯಲ್ಲೇ ನಿಲ್ಲಿಸಿದೆ. ಮೊಸಳೆ ಪಕ್ಕಕ್ಕೆ ಸರಿದು ಹೋದ ಮೇಲೆ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ಮೊಸಳೆರಾಯ ರೌಂಡ್ ಹಾಕುತ್ತಿರುವ ವಿಡಿಯೋವನ್ನು ನೀವು ಒಂದು ರೌಂಡ್ ನೋಡಿಕೊಂಡು ಬನ್ನಿ..

 

loader