ಬಿಜೆಪಿ ಜೊತೆ ಮೈತ್ರಿ ಇನ್ನೂ ಮುಂದುವರಿಯುತ್ತದೆ: ಟಿಡಿಪಿ

First Published 11, Mar 2018, 9:14 AM IST
Alliance with BJP still on But will fight for Andhra
Highlights

ಕೇಂದ್ರ ಸರ್ಕಾರದ ಸಚಿವ ಸ್ಥಾನದಿಂದ ಹಿಂದೆ ಸರಿದಿರುವ ಟಿಡಿಪಿ, ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದಿಂದ ಬೆಂಬಲ ಹಿಂದೆ ಪಡೆದಿರುವುದು ಮೊದಲ ಹೆಜ್ಜೆ.

ಅಮರಾವತಿ: ಕೇಂದ್ರ ಸರ್ಕಾರದ ಸಚಿವ ಸ್ಥಾನದಿಂದ ಹಿಂದೆ ಸರಿದಿರುವ ಟಿಡಿಪಿ, ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದಿಂದ ಬೆಂಬಲ ಹಿಂದೆ ಪಡೆದಿರುವುದು ಮೊದಲ ಹೆಜ್ಜೆ.

ಎರಡನೇ ಹೆಜ್ಜೆ ಏನಾಗಿರುತ್ತದೆ ಎಂದು ಕಾದುನೋಡಬೇಕು. ನಮ್ಮ ಮೈತ್ರಿ ಭದ್ರವಾಗಿದೆ, ಆದರೆ ಕೇಂದ್ರದಿಂದ ದೊರೆಯಬೇಕಾದ ರಾಜ್ಯದ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯುತ್ತದೆ ಎಂದು ರಾಜ್ಯ ಹಣಕಾಸು ಸಚಿವ ಯನಮಾಲ ರಾಮಕೃಷ್ಣಡು ಹೇಳಿದ್ದಾರೆ.

ಆಂಧ್ರ ಪ್ರದೇಶಕ್ಕೆ ಸಹಕಾರ ನೀಡುವ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿಕೆ ಬೇಸರ ತರಿಸಿದೆ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ವೈಎಸ್‌ಆರ್‌ ಕಾಂಗ್ರೆಸ್‌ ಸಲಹೆಯು ಅನೈತಿಕವಾದುದು ಎಂದೂ ಅವರು ಹೇಳಿದ್ದಾರೆ.

loader