Asianet Suvarna News Asianet Suvarna News

ಮೈತ್ರಿಯಿಂದ ಕೇವಲ ಎರಡಲ್ಲ, 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಲಾಭ!

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ SP ಮತ್ತು ಬಿಎಸ್ ಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈಗಾಗಲೇ ಕಾಂಗ್ರೆಸ್‌ ಪಕ್ಷವನ್ನು ಮೈತ್ರಿಯಿಂದ ಹೊರಗಿಡಲಾಗಿದೆ ಎನ್ನಲಗಿದೆ. ಹೀಗಿದ್ದರೂ ಕಾಂಗ್ರೆಸಡ್‌ಗೆ ಮಾಯ, ಅಖಿಲೇಶ್ ನಡೆಯಿಂದ ಬರೋಬ್ಬರಿ 6 ಕ್ಷೇತ್ರಗಳಲ್ಲಿ ಲಾಭವಾಗಲಿದೆ.

alliance between akhilesh yadav and mayawati s political party will help congress to win 6 seats
Author
Lucknow, First Published Jan 13, 2019, 5:07 PM IST

ಲಕ್ನೋ[ಜ.13]: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ SP ಮತ್ತು ಬಿಎಸ್ ಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಹೀಗಿದ್ದರೂ ಉಭಯ ಪಕ್ಷಗಳು ಕಾಂಗ್ರೆಸ್ ಪಕ್ಷದ ಕುರಿತಾಗಿ ಮೃಧು ಧೋರಣೆ ಹೊಂದಿವೆ. ಪ್ರಮುಖ ಕ್ಷೇತ್ರಗಳಾದ ಅಮೇಟಿ ಹಾಗೂ ರಾಯ್ ಬರೇಲಿಯನ್ನು ಸೋನಿಯಾ ಹಾಗೂ ರಾಹುಲ್ ಗಾಂಧಿಗಾಗಿ ಮೀಸಲಿಟ್ಟಿರುವುದು ಇದಕ್ಕೆ ಸಾಕ್ಷಿ ಎಂಬಂತಿದೆ. ಆದರೆ ಈ ಕ್ಷೇತ್ರಗಳನ್ನು ಯಾಕೆ ಬಿಟ್ಟುಕೊಟ್ಟಿದ್ದಾರೆ? ಇದರ ಹಿಂದಿನ ಕಾರಣ ಏನು? ಎಂಬುವುದು ತಿಳಿದು ಬಂದಿಲ್ಲ.

ಎಸ್ ಪಿ ಹಾಗೂ ಬಿಎಸ್ ಪಿಯ ಈ ಹೆಜ್ಜೆ ತೆರೆ ಹಿಂದಿನ ಮೈತ್ರಿ ಮುಂದುವರೆಯುತ್ತದೆ ಎಂಬುವುದನ್ನು ಸ್ಪಷ್ಟಪಡಿಸಿದೆ. ಹೀಗಿದ್ದರೂ ಬಿಎಸ್ ಪಿ ಹಾಗೂ ಎಸ್ ಪಿಯ ಈ ನಿರ್ಧಾರದಿಂದ ಕಾಂಗ್ರೆಸ್ ಗೆ ಕೇವಲ ಎರಡಲ್ಲ, ಆರು ಕ್ಷೇತ್ರಗಳಲ್ಲಿ ಲಾಭವಾಗುವುದು ಬಹುತೇಕ ಖಚಿತವಾಗಿದೆ. ಅದರಲ್ಲೂ ಮುಖ್ಯವಾಗಿ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತಾನು ಸೋತ ಕ್ಷೇತ್ರಗಳಲ್ಲೇ ಗೆಲುವು ಸಾಧಿಸಲು ಕಾಂಗ್ರೆಸ್ ಅಣಿಯಾಗಿದೆ.
ಕಾಂಗ್ರೆಸ್ ಗೆಲುವು ಸಾಧಿಸಲು ಸನ್ನದ್ಧವಾಗಿರುವ 6 ಕ್ಷೇತ್ರಗಳಲ್ಲಿ ಎಸ್ ಪಿ ಬಿಎಸ್ ಪಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಈಗಾಗಲೇ ಕಣಕ್ಕಿಳಿಸಿದೆ. ಹೀಗಿದ್ದರೂ ಈ ಅಭ್ಯರ್ಥಿಗಳು ಕಾಂಗ್ರೆಸ್ ಸ್ಪರ್ಧಿಗಳ ಎದುರು ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಈ 6 ಕ್ಷೇತ್ರಗಳಲ್ಲಿ ಸಹಾರನ್ ಪುರ್, ಕಾನ್ಪುರ್ ಹಾಗೂ ಗಾಜಿಯಾಬಾದ್ ನ ಪ್ರಮುಖ ಕ್ಷೇತ್ರಗಳೂ ಇವೆ.

ಲಭ್ಯವಾದ ಮಾಹಿತಿ ಅನ್ವಯ ಕಾಂಗ್ರೆಸ್ ಕೂಡಾ ಇಂತಹುದೇ ತಂತ್ರ ಹೆಣೆಯಲಿದೆ. ಎಸ್ ಪಿ ಹಾಗೂ ಎಸ್ ಪಿ ಪಕ್ಷದ ಈ ಮೃಧು ಧೋರಣೆಯ ಬದಲಿಗೆ ಕಾಂಗ್ರೆಸ್ ಪಕ್ಷವು ತಾನು ಸೋಲುತ್ತೇನೆಂಬ ಕ್ಷೇತ್ರಗಳಲ್ಲಿ, ಮಾಯಾ ಹಾಗೂ ಅಖಿಲೇಶ್ ಪಕ್ಷದ ಅಭ್ಯರ್ಥಿಗಳೆದುರು ಬಿಜೆಪಿ ಅಭ್ಯರ್ಥಿಯ ಮತಗಳನ್ನು ಕಡಿಮೆಗೊಳಿಸುವಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಇದಕ್ಕಾಗೇ ಇಂತಹ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಅಭ್ಯರ್ಥಿಗಳಿಗೆ ಅವಕಾಶ ನಿಡಲಿದೆ. ಈ ಮೂಲಕ ಪರೋಕ್ಷವಾಗಿ ಮೈತ್ರಿ ಪಕ್ಷಗಳಿಗೆ ಬೆಂಬಲ ಸೂಚಿಸಲಿದೆ.

2014ರಲ್ಲಿ ಕಾಂಗ್ರೆಸ್ ಈ ಕೆಳಗಿನ ಕ್ಷೇತ್ರಗಳಲ್ಲಿ ಬಿಜೆಪಿ ಎದುರು ಸೋಲುಂಡಿತ್ತು.

ಕ್ಷೇತ್ರ ಬಿಜೆಪಿ ಮತಗಳು ಕಾಂಗ್ರೆಸ್ ಮತಗಳು ಅಂತರ
ಸಹಾರ್‌ಪುರ್ 472999 407909 65090
ಲಕ್ನೋ 561106 288357 272749
ಕಾನ್‌ಪುರ್ 474712 251766 222946
ಬಾರಾಬಂಕಿ 454214 242336 211878
ಕುಶೀನಗರ್ 370051 284511 85540
ಗಾಜಿಯಾಬಾದ್ 758482 191222 567260


 

Follow Us:
Download App:
  • android
  • ios