ಕ್ರಿಕೆಟ್‌ನಲ್ಲೂ ಮಿಂಚಿದ್ದ ಗೌರಿ ಲಂಕೇಶ್‌ ಹಂತಕ : ಆತನಿಗಿದ್ದ ಬಿರುದೇನು..?

Alleged Gauri Lankesh killer a Virat batsman, and friends call him Kohli
Highlights

ಪತ್ರಕರ್ತೆ ಗೌರಿ ಲಂಕೇಶ ​ಹತ್ಯೆ ಪ್ರಕ​ರ​ಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ ವಾಗ್ಮೋರೆ ಉತ್ತಮ ಕ್ರಿಕೆಟ್‌ ಆಟಗಾರನಾಗಿದ್ದು, ಆತನ ಸ್ನೇಹಿತರು ಅವನನ್ನು ಕೋಹ್ಲಿ ಎನ್ನುತ್ತಿದ್ದುದ್ದಾಗಿ  ಮಾಹಿತಿ ನೀಡಿದ್ದಾರೆ.
 

ಸಿಂದಗಿ: ಪತ್ರಕರ್ತೆ ಗೌರಿ ಲಂಕೇಶ ​ಹತ್ಯೆ ಪ್ರಕ​ರ​ಣದಲ್ಲಿ ಬಂಧಿತನಾಗಿರುವ ಆರೋಪಿ ಪರಶುರಾಮ ವಾಗ್ಮೋರೆ ಉತ್ತಮ ಕ್ರಿಕೆಟ್‌ ಆಟಗಾರನಾಗಿದ್ದು, ವಿರಾಟ್‌ ಕೊಹ್ಲಿ ಎಂದು ಬಿರುದು ಪಡೆದುಕೊಂಡಿದ್ದ ಎಂದು ಆತನ ಸ್ನೇಹಿತರು ಮಾಹಿತಿ ನೀಡಿದ್ದಾರೆ.

ಉತ್ತಮ ಬ್ಯಾಟ್ಸ್‌ಮನ್‌ ಆಗಿದ್ದ ವಾಗ್ಮೋರೆ ಆಟಕ್ಕೆ ಮನಸೋತು, ಆತನನ್ನು ವಿರಾಟ್‌ ಕೊಹ್ಲಿಗೆ ಹೋಲಿಕೆ ಮಾಡಲಾಗಿತ್ತು. 2014ರಲ್ಲಿ ಲಿಂಗಸುಗೂರಿನಲ್ಲಿ ನಡೆದ ವಲಯ ಮಟ್ಟದ ಪಂದ್ಯಗಳಲ್ಲೂ ಭಾಗವಹಿಸಿದ್ದ. ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ಅನೇಕ ನಗರಗಳಲ್ಲಿ ಒಂದೊಂದು ತಂಡವನ್ನು ಪ್ರತಿನಿಧಿಸಿ, ಸ್ಥಳೀಯ ಪಂದ್ಯಾವಳಿಗಳಲ್ಲಿ ಮಿಂಚಿದ್ದ ಎಂದು ಹೇಳಿದ್ದಾರೆ.

ಅಲ್ಲದೇ ಸಿಂದಗಿಯಲ್ಲಿ ನಡೆಸುವ ಸಿಂದಗಿ ಪ್ರೀಮಿಯರ್‌ ಲೀಗ್‌ನಲ್ಲೂ ವಾಗ್ಮೋರೆ ತನ್ನ ಬ್ಯಾಟಿಂಗ್‌ ಚಳಕ ಪ್ರದರ್ಶಿಸಿದ್ದ. ಒಮ್ಮೆ ಸಹರಾ, ಮತ್ತೊಮ್ಮೆ ಸಿಂದಗಿ ವಾರಿಯರ್ಸ್‌ ತಂಡವನ್ನು ಪ್ರತಿನಿಧಿಸಿದ್ದ. ವಾಗ್ಮೋರೆ ಪ್ರತಿನಿಧಿಸಿದ್ದ ವಾರಿಯರ್ಸ್‌ ಒಂದು ವರ್ಷ ಚಾಂಪಿಯನ್‌ ಪಟ್ಟಸಹ ಅಲಂಕರಿಸಿತ್ತು. ಆದರೆ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಕಾರಣ ವಾಗ್ಮೋರೆ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದ ಎಂದು ಆತನ ಸ್ನೇಹಿತ ಬಳಗ ಹೇಳಿದೆ.

loader