ಕಾವಿ ತೊಟ್ಟು ಪೀಠ ಏರಿದರೆ ಗುರುವಾಗುತ್ತಾರಾ?

All Kaavi wearer is it Really Guru
Highlights

ಸರಳ ಜೀವನ, ಉನ್ನತ ಚಿಂತನೆ ಬದುಕಿನ ಬಂಡವಾಳವಾಗಬೇಕು. ಪಾರದರ್ಶಕತೆ ಬಹುಮುಖ್ಯ. ಸದುವಿನಯ, ಮೃದು ಹೃದಯ ಇದ್ದಾಗ ಆತ ಗುರುತ್ವಕ್ಕೆ ಅರ್ಹನಾಗುವುನು. ಆಡಂಬರ ಅನಗತ್ಯ. ಮಠ-ಪೀಠಗಳ ಮೇಲೆ ಕುಳಿತ ಗುರು ಜಿತೇಂದ್ರಿಯನಾಗುವುದು ತುಂಬಾ ಮುಖ್ಯ. ಆದರೆ ಇಂದು ಅನೇಕ ಮಠ-ಪೀಠಗಳ ಗುರುಗಳಲ್ಲಿ ಜಿತೇಂದ್ರಿಯತ್ವ ಕೇವಲ ತೋರಿಕೆಯಾಗಿದೆಯೇ ಹೊರತು ಅವರು ಭೋಗ ಸಾಮ್ರಾಜ್ಯದಲ್ಲಿ ಓಲಾಡುವುದನ್ನು ಕಾಣಬಹುದು. ಇಂದು ಮಾತ್ರ ಈ ಸ್ಥಿತಿ ಇದೆ ಎಂದಲ್ಲ. ಇದು ಎಲ್ಲ ಕಾಲಕ್ಕೂ ಇರುವಂತಹುದೆ. 

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಶಾಖಾಮಠ, ಸಾಣೇಹಳ್ಳಿ
ಗುರುತ್ವ ತುಂಬ ಹೊಣೆಗಾರಿಕೆಯದು. ಒಂದು ಮಠದ ಪೀಠ ಏರಿದರೆ, ಕಾವಿ ಧರಿಸಿದರೆ, ಹಲವು ಭಕ್ತರಿಂದ ‘ಉಘೇ ಚಾಂಗು ಭಲಾ’ ಎನಿಸಿಕೊಂಡರೆ ಆತ ಗುರುವಾಗುವುದಿಲ್ಲ. ಗುರು ಅರಿವಿನ ಆಗರವಾಗಿರಬೇಕು. ತಾನು ತಿಳಿಯ ಬೇಕಾದ್ದು ಸಾಕಷ್ಟಿದೆ, ತಿಳಿದಿರುವುದು ಅಲ್ಪ ಎನ್ನುವ ವಿನಯವಿರಬೇಕು. ಅಂತರಂಗ, ಬಹಿ ರಂಗ ಶುದ್ಧಿ ತುಂಬಾ ಅಗತ್ಯ. ನಡೆ-ನುಡಿಯಲ್ಲಿ ಹೋಂದಾಣಿಕೆಯಿರಬೇಕು.ಮೋಹ, ಮದ, ಮತ್ಸರಗಳಿಂದ ದೂರವಿದ್ದು ಸಕಲ ಜೀವಾತ್ಮರ ಒಳಿತು ಬಯಸಬೇಕು. ಜೀವ ದಯೆ ಎದ್ದು ತೋರಬೇಕು.
ಸರಳ ಜೀವನ, ಉನ್ನತ ಚಿಂತನೆ ಬದುಕಿನ ಬಂಡವಾಳವಾಗಬೇಕು. ಪಾರದರ್ಶಕತೆ ಬಹುಮುಖ್ಯ. ಸದುವಿನಯ, ಮೃದು ಹೃದಯ ಇದ್ದಾಗ ಆತ ಗುರುತ್ವಕ್ಕೆ ಅರ್ಹನಾಗುವುನು. ಆಡಂಬರ ಅನಗತ್ಯ. ಮಠ-ಪೀಠಗಳ ಮೇಲೆ ಕುಳಿತ ಗುರು ಜಿತೇಂದ್ರಿಯನಾಗುವುದು ತುಂಬಾ ಮುಖ್ಯ. ಆದರೆ ಇಂದು ಅನೇಕ ಮಠ-ಪೀಠಗಳ ಗುರುಗಳಲ್ಲಿ ಜಿತೇಂದ್ರಿಯತ್ವ ಕೇವಲ ತೋರಿಕೆಯಾಗಿದೆಯೇ ಹೊರತು ಅವರು ಭೋಗ ಸಾಮ್ರಾಜ್ಯದಲ್ಲಿ ಓಲಾಡುವುದನ್ನು ಕಾಣಬಹುದು. ಇಂದು ಮಾತ್ರ ಈ ಸ್ಥಿತಿ ಇದೆ ಎಂದಲ್ಲ. ಇದು ಎಲ್ಲ ಕಾಲಕ್ಕೂ ಇರುವಂತಹುದೆ. 
ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು 1937-38ರ ತಮ್ಮ ದಿನಚರಿಯಲ್ಲಿ ಈ ಗುರುಗಳ ಗುಣಗಾನ ಮಾಡಿರುವುದನ್ನು ನೋಡಿ: ಈಗಿನ ಸಂನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸಂನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ. ಗುರುಗಳಾಗುವುದೆಂದರೆ ನಾಟಕದಲ್ಲಿ ವೇಷ ಹಾಕಿಕೊಂಡು ಪಾರ್ಟು ಮಾಡುವುದೆಂದು ಜನರು ಭಾವಿಸಿರುವಂತೆ ತೋರುತ್ತದೆ. ಶಿವ ಶಿವ! ದನ ಕಾಯುವವರೆಲ್ಲಾ, ಸುಳ್ಳು ಹೇಳುವವರೆಲ್ಲಾ, ವಿಧವಾ ಪ್ರಿಯರೆಲ್ಲಾ ನಿನ್ನ ಹೆಸರಿನಿಂದ ದೇಶದಲ್ಲಿ ಮೆರೆಯುತ್ತಾರಲ್ಲ!
ನಮ್ಮ ಗುರುಗಳು ಅವರ ಕಾಲದ ಗುರು ವರ್ಗದ ಸ್ವಭಾವವನ್ನು ಇನ್ನೂ ಕಠೋರವಾಗಿ ಅನಾವರಣಗೊಳಿಸಿದ್ದಾರೆ. ಅಂಥ ಗುರುಗಳಿಗೆ ‘ಕೈಲಾಗದವನಾದರೆ ಈ ಮಾರ್ಗದಿಂದಲೇ ದೂರ ಇರು. ಆಡಂಬರದ ಡಾಂಭಿಕದ ಗುರುತ್ವವನ್ನು ಕೈಬಿಡು. ಗುರುವಾಗು, ನಿಜವಾದ ಗುರುತ್ವದ ಮಹಿಮೆಯನ್ನು ಜಗತ್ತಿಗೆ ಬೋಧಿಸು’ ಎಂದದ್ದಲ್ಲದೆ ‘ಗುರುಗಳಾದವರೆಲ್ಲರೂ ಶಿಷ್ಯ ಸೇವೆಯೇ ಈಶ ಸೇವೆಯೆಂಬ ಮಂತ್ರವನ್ನು ಗ್ರಹಿಸತಕ್ಕವರಾಗಬೇಕು’ ಎಂದು ಅವರ ಕರ್ತವ್ಯವನ್ನು ಎಚ್ಚರಿಸಿದ್ದಾರೆ.

loader