ಸಿದ್ಧಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಎಂ.ಬಿ.ಪಾಟೀಲ್, ಇದು ನಮ್ಮ ಮಠ, ವಿವಾದವೆಲ್ಲ ಅಂತ್ಯಗೊಂಡಿದೆ, ಇನ್ನು ಯಾವುದೇ ವಿವಾದವಿಲ್ಲವೆಂದು ಹೇಳಿದ್ದಾರೆ. ಇವತ್ತಿಗೆ ಎಲ್ಲಾ ಗೊಂದಲಗಳು ಮುಕ್ತಾಯಗೊಂಡಿವೆ, ಎಲ್ಲಾ ಸಿದ್ಧಗಂಗಾ ಸ್ವಾಮೀಜಿಗಳ ಅಣತಿಯಂತೆ ‌ನಡೆಯುತ್ತದೆ ಎಂದು ಮಠದ ಶ್ರೀಗಳ ಭೇಟಿ ಬಳಿಕ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ತುಮಕೂರು: ಸಿದ್ಧಗಂಗಾ ಮಠಕ್ಕೆ ಇಂದು ಭೇಟಿ ನೀಡಿದ ಎಂ.ಬಿ.ಪಾಟೀಲ್, ಇದು ನಮ್ಮ ಮಠ, ವಿವಾದವೆಲ್ಲ ಅಂತ್ಯಗೊಂಡಿದೆ, ಇನ್ನು ಯಾವುದೇ ವಿವಾದವಿಲ್ಲವೆಂದು ಹೇಳಿದ್ದಾರೆ.
ಇವತ್ತಿಗೆ ಎಲ್ಲಾ ಗೊಂದಲಗಳು ಮುಕ್ತಾಯಗೊಂಡಿವೆ, ಎಲ್ಲಾ ಸಿದ್ಧಗಂಗಾ ಸ್ವಾಮೀಜಿಗಳ ಅಣತಿಯಂತೆ ನಡೆಯುತ್ತದೆ ಎಂದು ಮಠದ ಶ್ರೀಗಳ ಭೇಟಿ ಬಳಿಕ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಪಕ್ಷಗಳ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಲು ಎಂ.ಬಿ. ಪಾಟೀಲ್ ಈ ಸಂದರ್ಭದಲ್ಲಿ ನಿರಾಕರಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಯಿಂದ ಬೇಸರಗೊಂಡು ಭೇಟಿ ನೀಡಿದ್ದಾರೆ, ಎಂ.ಬಿ. ಪಾಟೀಲರು ಕ್ಷಮಿಸುವಂಥ ಗುರುದ್ರೋಹವನ್ನೇನು ಮಾಡಿಲ್ಲ . ಪಾಟೀಲರು ಕ್ಷಮೆ ಕೇಳುವ ಅಗತ್ಯವಿಲ್ಲ, ಈಗ ಅವರು ನಿರಾಳವಾಗಿದ್ದಾರೆ ಎಂದು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
