ಚೀನಾದ ಆಲಿಬಾಬಾ ಕಂಪೆನಿಯು ತನ್ನ ವಾರ್ಷಿಕ ಸಿಂಗಲ್ಸ್ ಡೇ ಸೇಲ್ ಅದ್ಧೂರಿಯಾಗಿ ಆರಂಭಿಸಿದೆ. ಕಂಪೆನಿಯ ಸೇಲ್ ಆರಂಭವಾದ ಕೇವಲ 5 ನಿಮಿಷಗಳಲ್ಲೇ ಮೂರು ಬಿಲಿಯನ್ ಅಂದರೆ ಸುಮಾರು 21 ಸಾವಿತರ ಕೋಟಿ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದೆ. 24 ಗಂಟೆಗಳ ಈ ಸೇಲ್ ಭಾನುವಾರ ಆರಂಭವಾಗಿದೆ.
ಚೀನಾದ ಇ-ಕಾಮರ್ಸ್ ಕಂಪೆನಿ ಆಲಿಬಾಬಾ ತನ್ನ ವಾರ್ಷಿಕ ಸಿಂಗಲ್ಸ್ ಡೇ ಸೇಲ್ ಅದ್ಧೂರಿಯಾಗಿ ಆರಂಭಿಸಿದೆ. ಕಂಪೆನಿಯ ಸೇಲ್ ಆರಂಭವಾದ ಕೇವಲ 5 ನಿಮಿಷಗಳಲ್ಲೇ ಮೂರು ಬಿಲಿಯನ್ ಅಂದರೆ ಸುಮಾರು 21 ಸಾವಿರ ಕೋಟಿ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಿದೆ. 24 ಗಂಟೆಗಳ ಈ ಸೇಲ್ ಭಾನುವಾರ ಆರಂಭವಾಗಿದೆ.
ಆ್ಯಪಲ್ ಹಾಗೂ ಕ್ಸಿಯೋಮಿಯಂತಹ ಟಾಪ್ ಬ್ರಾಂಡ್ ಗಳು ಎಲ್ಲಕ್ಕಿಂತಲೂ ಹೆಚ್ಚು ಸೇಲ್ ಆಗಿವೆ. ಒಂದು ಗಂಟೆಯಲ್ಲಿ ಮಾರಾಟವಾದ ವಸ್ತುಗಳ ಮೌಲ್ಯ 10 ಬಿಲಿಯನ್ ಡಾಲರ್ ತಲುಪಿದೆ. ಕಳೆದ ವರ್ಷ ನಡೆದ ವಾರ್ಷಿಕ ಸೇಲ್‌ನಲ್ಲಿ 24 ಗಂಟೆಗಳಲ್ಲಿ 25 ಬಿಲಿಯನ್ ಡಾಲರ್‌ನ ವ್ಯವಹಾರ ನಡೆದಿತ್ತು. ಆಲಿಬಾಬಾ ಕಂಪೆನಿಯ ಸಂಸ್ಥಾಪಕ ಜ್ಯಾಕ್ ಮಾ ಸೇಲ್‌ನ ಕ್ಷಣಗಣನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಾಜರಿದ್ದರು.
ಆಲಿಬಾಬಾ ಕಂಪೆನಿಯ ಈ ಅದ್ಧೂರಿ ಸೇಲ್‌ನಲ್ಲಿ ಲಾಸ್ ಏಂಜಲೀಸ್, ಟೋಕಿಯೋ ಹಾಗೂ ಪ್ರ್ಯಾಂಕ್‌ಫರ್ಟ್‌ನ ಜನರೂ ಶಾಪಿಂಗ್ ನಡೆಸಿದ್ದಾರೆ. ಜನರು ಈ ಸೇಲ್‌ನಲ್ಲಿ ಡೈಪರ್‌ನಿಂದ ಹಿಡಿದು ಮೊಬೈಲ್ ಹೀಗೆ ಪ್ರತಿಯೊಂದನ್ನೂ ಖರೀದಿಸಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಇತ್ತೀಚೆಗಷ್ಟೇ ಚೀನಾದ ಅರ್ಥ ವ್ಯವಸ್ಥೆ ಕುಸಿದಿದೆ ಎನ್ನಲಾಗಿದೆ. ಹೀಗಾಗಿ ಆಲಿಬಾಬಾಗೆ ಬರುವ ಲಾಭವೂ ಕಡಿಮೆಯಾಗುವ ಸಾಧ್ಯತೆಗಳಿವೆ.
ಆಲಿಬಾಬಾ ಕಂಪೆನಿಯು ತನ್ನ ಈ ವಾರ್ಷಿಕ ಸೇಲ್ 2009ರಲ್ಲಿ ಆರಂಭಿಸಿತ್ತು. ಇದಾದ ಬಳಿಕ ಜನರು ಪ್ರತಿವರ್ಷ ಈ ಸೇಲ್ ಗಾಗಿ ಭಾರೀ ಕುತೂಹಲದಿಂದ ಕಾಯುತ್ತಾರೆ.
