ಇಂದು ಮಧ್ಯಪ್ರದೇಶದ ಕಾರ್ಗೋನೆ ಜಿಲ್ಲೆಯ ಗ್ರಾಮವೊಂದರಲ್ಲಿ ಟಾಯ್ಲೆಟ್ ನಿರ್ಮಾಣಕ್ಕೆ ಹೊಂಡವನ್ನು ಅಕ್ಷಯ್ ಕುಮಾರ್ ಅಗೆದಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಕಳೆದ ತಿಂಗಳು ಸುಕ್ಮಾ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ರೂ.1 ಕೋಟಿ ಸಹಾಯಧನ ನೀಡಿ ಮಾದರಿಯೆನಿಸಿದ್ದರು. ಈಗ ಸ್ವಚ್ಛ ಭಾರತ ಮಿಶನನ್ನು ಮುಂದಿಟ್ಟುಕೊಂಡು - ಟಾಯ್ಲೆಟ್ ಏಕ್ ಪ್ರೇಮ್ ಕಥಾ- ಎಂಬ ಸಿನೆಮಾವನ್ನು ಕೂಡಾ ಅಕ್ಷಯ್ ಕುಮಾರ್ ಹೊರತರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಇಂದು ಮಧ್ಯಪ್ರದೇಶದ ಕಾರ್ಗೋನೆ ಜಿಲ್ಲೆಯ ಗ್ರಾಮವೊಂದರಲ್ಲಿ ಟಾಯ್ಲೆಟ್ನಿರ್ಮಾಣಕ್ಕೆ ಹೊಂಡವನ್ನು ಅಕ್ಷಯ್ ಕುಮಾರ್ ಅಗೆದಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ತೋಮರ್ ಕೂಡಾ ಉಪಸ್ಥಿತರಿದ್ದು. ಟಾಯ್ಲೆಟ್ ಏಕ್ ಪ್ರೇಮ್ ಕಥಾ ಸಿನೆಮಾದಲ್ಲಿ ಭೂಮಿ ಪೆಡ್ನೇಕರ್ ನಟಿಸಿದ್ದು, ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.
