ಇಂಡಿಯಾ-ಇಂಗ್ಲೆಂಡ್ ಮಹಿಳಾ ವಿಶ್ವಕಪ್ ಪಂದ್ಯದ ವೇಳೆ ಲಾಡ್ಸ್ ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಮುಖವಾಗಿ ಹಿಡಿದು ಟೀಕೆಗೊಳಗಾಗಿದ್ದ ನಟ ಅಕ್ಷಯ್ ಕುಮಾರ್ ಕ್ಷಮಾಪಣೆ ಕೋರಿದ್ದಾರೆ.
ನವದೆಹಲಿ (ಜು.24): ಇಂಡಿಯಾ-ಇಂಗ್ಲೆಂಡ್ ಮಹಿಳಾ ವಿಶ್ವಕಪ್ ಪಂದ್ಯದ ವೇಳೆ ಲಾಡ್ಸ್ ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಮುಖವಾಗಿ ಹಿಡಿದು ಟೀಕೆಗೊಳಗಾಗಿದ್ದ ನಟ ಅಕ್ಷಯ್ ಕುಮಾರ್ ಕ್ಷಮಾಪಣೆ ಕೋರಿದ್ದಾರೆ.
ಮ್ಯಾಚ್ ನಡೆಯುತ್ತಿದ್ದ ವೇಳೆ ಅಕ್ಷಯ್ ಕುಮಾರ್ ಭಾರತದ ಧ್ವಜವನ್ನು ತಲೆಕೆಳಗಾಗಿ ಹಿಡಿದಿದ್ದರು. ತಮ್ಮ ತಪ್ಪಿನ ಅರಿವಿಲ್ಲದೇ ಆ ಫೋಟೋವನ್ನು ಟ್ವೀಟ್ ಮಾಡಿದ್ದರು. ಜಾಲತಾಣಿಗರಿಂದ ಟೀಕೆಗಳ ಸುರಿಮಳೆ ಬಂದ ಕೂಡಲೇ ತಪ್ಪಿನ ಅರಿವಾಗಿ ಕೂಡಲೇ ಡಿಲೀಟ್ ಮಾಡಿದ್ದಾರೆ. ಜೊತೆಗೆ ಕ್ಷಮಾಪಣೆ ಕೋರಿದ್ದಾರೆ. ಭಾರತೀಯ ತ್ರಿವರ್ಣ ಧ್ವಜದ ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಪೋಟೋವನ್ನು ಡಿಲೀಟ್ ಮಾಡಲಾಗಿದೆ ಎಂದು ಟ್ವಿಟ್ ಮಾಡಿದ್ದಾರೆ. ಜೊತೆಗೆ ಭಾರತೀಯ ವನಿತೆಯರಿಗೆ ಶುಭಕೋರಿದ್ದಾರೆ.
ಫೋಟೋ ಕೃಪೆ: ಇಂಡಿಯಾ
