Asianet Suvarna News Asianet Suvarna News

ಅಕ್ರಮ-ಸಕ್ರಮ ಬಂಪರ್..!

ಇದುವರೆಗೂ ಕಂದಾಯ ಜಾಗದಲ್ಲಿ 2012ರ ಜನವರಿವರೆಗೆ ಅನಧಿಕೃತವಾಗಿ ನಿರ್ಮಿಸಿದ ವಾಸದ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಅನಂತರ ನಿರ್ಮಾಣವಾದ ವಾಸದ ಮನೆಗಳಿಗೆ ಸಕ್ರಮಗೊಳಿಸಿಕೊಳ್ಳುವ ಅವಕಾಶವಿರಲಿಲ್ಲ.

Akrama Sakrama Bumper

ಬೆಂಗಳೂರು(ನ.24): ನಗರ, ಪಟ್ಟಣಗಳ ವ್ಯಾಪ್ತಿಯ ಕಂದಾಯ ಜಾಗದಲ್ಲಿರುವ ಮನೆಗಳ ಅಕ್ರಮ-ಸಕ್ರಮಕ್ಕೆ ನಿಗದಿ ಮಾಡಿದ್ದ ಕಟ್ ಅಫ್ ಸಮಯವನ್ನು 2015ರ ಜನವರಿವರೆಗೆ ವಿಸ್ತರಿಸುವ ಕರ್ನಾಟಕ ಭೂ ಕಂದಾಯ (ನಾಲ್ಕನೇ) ತಿದ್ದುಪಡಿ ವಿಧೇಯಕಕ್ಕೆ ಗುರುವಾರ ವಿಧಾನಸಭೆ ಒಪ್ಪಿಗೆ ನೀಡಿದೆ.

ಇದುವರೆಗೂ ಕಂದಾಯ ಜಾಗದಲ್ಲಿ 2012ರ ಜನವರಿವರೆಗೆ ಅನಧಿಕೃತವಾಗಿ ನಿರ್ಮಿಸಿದ ವಾಸದ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿತ್ತು. ಅನಂತರ ನಿರ್ಮಾಣವಾದ ವಾಸದ ಮನೆಗಳಿಗೆ ಸಕ್ರಮಗೊಳಿಸಿಕೊಳ್ಳುವ ಅವಕಾಶವಿರಲಿಲ್ಲ. ಕಟ್‌'ಆಫ್ ಅವಧಿ ವಿಸ್ತರಿಸಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಭೂ ಕಂದಾಯ ತಿದ್ದುಪಡಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲಾಗಿದ್ದು, ಇದರಂತೆ, 2015ರ ಜನವರಿವರೆಗೂ ನಿರ್ಮಿಸಿದ ಅನಧಿಕೃತ ಮನೆಗಳು ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಬಹುದು.

ಗುರುವಾರ ಸದನದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸದನದಲ್ಲಿ ವಿಧೇಯಕ ಮಂಡಿಸಿದರು. ನಂತರ ಮಾತನಾಡಿ, ಅರ್ಜಿದಾರರು ಇನ್ನೂ ಅನೇಕ ಮಂದಿ ಇದ್ದಾರೆ. ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿ ಎಂದು ಈ ವಿಧೇಯಕ ತರಲಾಗಿದೆ. ಇದಕ್ಕೆ ಸದನ ಒಪ್ಪಿಗೆ ನೀಡಬೇಕೆಂದು ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಸದನ ಸರ್ವಾನುಮತದಿಂದ ಅಂಗೀಕಾರ ನೀಡಿತು. ಇದರ ಪ್ರಕಾರ, ಭೂ ಕಂದಾಯ ಅಧಿನಿಯಮ 1964ರ ಅಧಿನಿಯದ 94ಸಿಯಲ್ಲಿ ಗ್ರಾಮೀಣ ಭಾಗದಲ್ಲಿ ಕಂದಾಯ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿದವರು ಅರ್ಜಿ ಸಲ್ಲಿಸಬಹುದು. ಅದೇರೀತಿ 94ಸಿಸಿಯಡಿ ಪಟ್ಟಣ, ನಗರ ಪ್ರದೇಶಗಳ ನಿವಾಸಿಗಳು ಅರ್ಜಿ ಸಲ್ಲಿಸಬಹುದು.

Follow Us:
Download App:
  • android
  • ios