ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಷ್ಟು ದಿನ  ಅಪ್ಪ-ಮಗನ ಕಿತ್ತಾಟದಲ್ಲಿ ಸುದ್ದಿಯಲ್ಲಿದ್ದರು. ಈಗ ತಾವೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ನವದೆಹಲಿ (ಜ.29): ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಇಷ್ಟು ದಿನ ಅಪ್ಪ-ಮಗನ ಕಿತ್ತಾಟದಲ್ಲಿ ಸುದ್ದಿಯಲ್ಲಿದ್ದರು. ಈಗ ತಾವೇ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜೊತೆ ಅಖಿಲೇಶ್ ಯಾದವ್ ಜಂಟಿ ಪತ್ರಿಕಾಗೋಷ್ಟಿ ನಡೆಸುವಾಗ ಮಾಯಾವತಿಯವರ ಗಾತ್ರದ ಬಗ್ಗೆ ಗೇಲಿ ಮಾಡಿದರು.

ಮೈತ್ರಿಕೂಟದಲ್ಲಿ ಬಿಎಸ್ಪಿ ಭಾಗಿಯಾಗುತ್ತದೆಯೇ ಎನ್ನುವ ಪತ್ರಕರ್ತರ ಪ್ರಶ್ನೆಗೆ, ‘ನಾವು ಅವರಿಗೆ ಹೇಗೆ ಜಾಗ ಕೊಡುವುದು? ಅವರ ಪಕ್ಷದ ಚಿಹ್ನೆ ಆನೆಯ ಹಾಗೆ ಅವರಿಗೂ ತುಂಬಾ ಜಾಗಬೇಕು’ ಎಂದು ಅಖಿಲೇಶ್ ಯಾದವ್ ಗೇಲಿ ಮಾಡಿದ್ದಾರೆ.

ಆದರೆ ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಯಾವತಿಯನ್ನು ಹೊಗಳಿದ್ದಾರೆ. ಮಾಯಾವತಿಯವರು ಅಧಿಕಾರದಲ್ಲಿದ್ದಾಗ ಕೆಲವು ತಪ್ಪುಗಳನ್ನು ಮಾಡಿದ್ದಾರೆ. ಆದರೆ ಆರ್ ಎಸ್ ಎಸ್ ಹಾಗೆ ಅಪಾಯಕಾರಿಯಲ್ಲ. ಅವರ ಸಿದ್ಧಾಂತಗಳು ದೇಶಕ್ಕೆ ಮಾರಕವಲ್ಲ. ಮಾಯವತಿ ಜೀಯನ್ನು ಆರ್ ಎಸ್ ಎಸ್ ಜೊತೆ ಹೋಲಿಸಬೇಡಿ. ನನಗೆ ವೈಯಕ್ತಿಕವಾಗಿ ಅವರ ಬಗ್ಗೆ ಗೌರವವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.