ಆಕಾಶ್‌ ಅಂಬಾನಿ, ಶ್ಲೋಕಾ ವಿವಾಹ ನಿಶ್ಚಿತಾರ್ಥ : ಹೇಗಿದೆ ಇನ್ವಿಟೇಶನ್

Akash Ambani, Shloka Mehta to get engaged on June 30
Highlights

ರಿಲಯನ್ಸ್‌ ಇಂಡಸ್ಟ್ರೀಸ್‌ ಮಾಲೀಕ ಮುಕೇಶ್‌ ಅಂಬಾನಿಯ ಹಿರಿಯ ಪುತ್ರ ಆಕಾಶ್‌ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ವಿವಾಹ ನಿಶ್ವಿತಾರ್ಥ ಜೂ.30ರಂದು ನಡೆಯಲಿದೆ. ನಿಶ್ಚಿತಾರ್ಥಕ್ಕೆ ವಿಡಿಯೋ ಮೂಲಕ ಆಹ್ವಾನವನ್ನು ನೀಡಲಾಗಿದೆ. 

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಮಾಲೀಕ ಮುಕೇಶ್‌ ಅಂಬಾನಿಯ ಹಿರಿಯ ಪುತ್ರ ಆಕಾಶ್‌ ಅಂಬಾನಿ ಹಾಗೂ ಶ್ಲೋಕಾ ಮೆಹ್ತಾ ವಿವಾಹ ನಿಶ್ವಿತಾರ್ಥ ಜೂ.30ರಂದು ನಡೆಯಲಿದೆ. 

ಈ ನಿಮಿತ್ತ ಮುಕೇಶ್‌ ಮತ್ತು ನೀತಾ ಅಂಬಾನಿ ದಂಪತಿ ವಿಡಿಯೋ ಸಂದೇಶವಿರುವ ಆಹ್ವಾನ ಪತ್ರಿಕೆಯನ್ನು ಅತಿಥಿಗಳಿಗೆ ಕಳುಹಿಸಿದ್ದಾರೆ. ಈ ವಿಡಿಯೋದಲ್ಲಿ ಹಿಂದಿಯ ಕೈ ಪೋ ಚೆ ಚಿತ್ರದ ‘ಶುಭಾರಂಭ್‌’ ಹಾಡನ್ನು ಹಿನ್ನೆಲೆಯಾಗಿ ಬಳಸಿಕೊಳ್ಳಲಾಗಿದೆ. 

ಆಹ್ವಾನ ಪತ್ರಿಕೆಯಲ್ಲಿ ನವ ಜೋಡಿಗಳಾದ ಆಕಾಶ್‌ ಅಂಬಾನಿ ಮತ್ತು ಶ್ಲೋಕಾ ಮೆಹತಾ ಕಾಣಿಸಿಕೊಂಡಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮ ಜೂ.30ರಂದು ನಡೆಯಲಿದ್ದು, ದಯವಿಟ್ಟು ಈ ದಿನಾಂಕವನ್ನು ಕಾದಿರಿಸಿಕೊಳ್ಳಿ ಎಂದು ಮುಕೇಶ್‌ ಮತ್ತು ನೀತಾ ಅಂಬಾನಿ ಮನವಿ ಮಾಡಿಕೊಂಡಿದ್ದಾರೆ. 

ಮುಂಬೈನ ಅಲ್ಟಮೌಂಟ್‌ ರಸ್ತೆಯಲ್ಲಿ ಇರುವ ಮುಕೇಶ್‌ ಅಂಬಾನಿ ಅವರ ‘ಅಂಟಿಲಿಯಾ’ ನಿವಾಸದಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಡಿಸೆಂಬರ್‌ನಲ್ಲಿ ವಿವಾಹ ಸಮಾರಂಭ ನೆರವೇರುವ ಸಾಧ್ಯತೆ ಇದೆ.

 

loader