ಯುವಿ ಮಾತ್ರವಲ್ಲದೇ ತಮ್ಮ ಪತಿ ಹಾಗೂ ಯುವಿ ಸಹೋದರ ಜೋರವರ್‌ ಸಿಂಗ್‌, ಯುವಿ ತಾಯಿ ಶಬ್ನಮ್‌ ಸಿಂಗ್‌ ವಿರುದ್ಧ ಆರೋಪ ಹೊರಿಸಿದ್ದಾರೆ

ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರ ಯುವರಾಜ್‌ ಸಿಂಗ್‌ ವಿರುದ್ಧ ಅವರ ಸಹೋದರನ ಪತ್ನಿ, ಬಿಗ್‌ಬಾಸ್‌ 10ರ ಸ್ಪರ್ಧಿ ಆಕಾಂಕ್ಷ ಶರ್ಮಾ ದೂರು ಕೊಟ್ಟಿದ್ದಾರೆ. ತಮ್ಮ ಮೇಲೆ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆಕಾಂಕ್ಷ, ಯುವಿ ಮಾತ್ರವಲ್ಲದೇ ತಮ್ಮ ಪತಿ ಹಾಗೂ ಯುವಿ ಸಹೋದರ ಜೋರವರ್‌ ಸಿಂಗ್‌, ಯುವಿ ತಾಯಿ ಶಬ್ನಮ್‌ ಸಿಂಗ್‌ ವಿರುದ್ಧ ಆರೋಪ ಹೊರಿಸಿದ್ದಾರೆ. ಈ ಕುರಿತು ಆಕಾಂಕ್ಷ ಮಾತನಾಡುವುದಕ್ಕೆ ನಿರಾಕರಿಸಿದ್ದು, ಅಕ್ಟೋಬರ್​ 21ರಂದು ನಡೆಯಲಿರುವ ನ್ಯಾಯಾಲಯ ವಿಚಾರಣೆ ನಂತರ ವಿವರಿಸುವುದಾಗಿ ತಿಳಿಸಿದ್ದಾರೆ.