ಮೋಗಾ(ಪಂಜಾಬ್) ಸೆ.24: ಇಲ್ಲಿನ ಆಸ್ಪತ್ರೆಯಲ್ಲಿ ಕರ್ತವ್ಯನಿರತ ನರ್ಸ್‌ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿರೋಮಣಿ ಅಕಾಲಿ ದಳ ನಾಯಕ ಪರಮ್‌ಜಿತ್‌ ಸಿಂಗ್‌ ಮತ್ತು ಅವರ ಪುತ್ರನನ್ನು ಶುಕ್ರವಾರ ಬಂಧಿಸಲಾಗಿದೆ.

ವೈದ್ಯರ ಭೇಟಿಗಾಗಿ ಬಂದಿದ್ದ ತಂದೆ ಹಾಗೂ ಪುತ್ರನನ್ನು ಕೊಂಚ ಹೊತ್ತು ಕಾಯಲು ನರ್ಸ್‌ ಸೂಚಿಸಿದ್ದರು. ಅವರಿಬ್ಬರು ತಮ್ಮ ಆಪ್ತ ಬಂಧುವೊಂಬ್ಬರ ಡಿಸ್ಚಾಜ್‌ರ್‍ಗಾಗಿ ಬಂದಿದ್ದರು. ಸೂಚನೆಯಿಂದ ಕ್ರುದ್ಧರಾದ ಪರಮ್‌ಜಿತ್‌ ಸಿಂಗ್‌ ನರ್ಸ್‌ ಅವರನ್ನು ನಿಂದಿಸಿದರಲ್ಲದೆ, ತಳ್ಳಿದರು. ಇದರ ಜತೆಗೆ ಅವರಿಗೆ ಒದ್ದಿದ್ದಾರೆ. ಅವರು ಆರು ತಿಂಗಳ ಗರ್ಭಿಣಿಯಾಗಿದ್ದಾರೆ. ಈ ಗದ್ದಲದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿತ್ತು.