ಮೊದಲ ಮಾನಹಾನಿ ದಾವೆಯ ವಿಚಾರಣೆ ವೇಳೆ ಈ ಪದವನ್ನು ಕೇಜ್ರಿವಾಲ್ ಪರ ಅವರ ವಕೀಲ ರಾಮ್ ಜೇಠ್ಮಲಾನಿ ಪ್ರಯೋಗಿಸಿದ್ದರು.

ನವದೆಹಲಿ(ಜು.27): ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹೂಡಿದ ಎರಡನೇ ಮಾನಹಾನಿ ದಾವೆಗೆ ಸಂಬಂಧಿಸಿದಂತೆ 10ಸಾವಿರ ರು. ಕೋರ್ಟ್ ಕಲಾಪದ ವೆಚ್ಚವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೇಲೆಯೇ ದಿಲ್ಲಿ ಹೈಕೋರ್ಟ್ ಹೊರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮನ್ನು ಮೋಸಗಾರ ಎಂದು ಕೇಜ್ರಿವಾಲ್ ಅವರು ವಕೀಲರ ಮೂಲಕ ಜರಿದಿದ್ದನ್ನು ಪ್ರಶ್ನಿಸಿದ್ದ ಜೇಟ್ಲಿ, ಕೇಜ್ರಿವಾಲ್ ಮೇಲೆ 10 ಕೋಟಿ ರು. ಮಾನಹಾನಿ ದಾವೆ ಹಾಕಿದ್ದರು. ಮೊದಲ ಮಾನಹಾನಿ ದಾವೆಯ ವಿಚಾರಣೆ ವೇಳೆ ಈ ಪದವನ್ನು ಕೇಜ್ರಿವಾಲ್ ಪರ ಅವರ ವಕೀಲ ರಾಮ್ ಜೇಠ್ಮಲಾನಿ ಪ್ರಯೋಗಿಸಿದ್ದರು.

ಬುಧವಾರ ನಡೆದ ವಿಚಾರಣೆ ವೇಳೆ ಕೇಜ್ರಿವಾಲ್ ಪರ ವಕೀಲರು ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಮತ್ತೆರಡು ವಾರ ಕಾಲಾವಕಾಶ ಕೇಳಿದರು. ಹೀಗಾಗಿ 2 ವಾರ ಅವಕಾಶ ನೀಡಿದ ಕೋರ್ಟು, ಕಲಾಪದ ವೆಚ್ಚವೆಂದು 10 ಸಾವಿರ ರು. ಠೇವಣಿ ಇಡುವಂತೆ ಸೂಚಿಸಿತು.