ದೇಶಾದ್ಯಂತ ಐನೂರು-ಸಾವಿರ ಮುಖಬೆಲೆ ನೋಟುಗಳ ಬ್ಯಾನ್ ಮಾಡಿ ಆದೇಶ ಹೊರಡಿಸಿದಾಗಿನಿಂದಲೂ ಪ್ರಧಾನಿ ನರೇಂದ್ರ ಮೋದಿಯವರ ಪರ-ವಿರೋಧ ಹೇಳಿಕೆ ಕೇಳಿ ಬರುತ್ತಿದೆ. ತರಕಾರಿ ಮಾರುವವರಿಂದ ಹಿಡಿದು ಸ್ಟಾರ್‌ ಸೆಲೆಬ್ರಿಟಿಗಳವರೆಗೆ ಪ್ರಧಾನಿ ಮೋದಿಯವರ ಈ ನಿರ್ಧಾರಕ್ಕೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಬಾಲಿವುಡ್ ನಟಿ- ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಇದೇ ಮೊದಲ ಬಾರಿಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದು, ಪ್ರಧಾನಿ ಮೋದಿಯವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈ(ನ.13): ದೇಶಾದ್ಯಂತ ಐನೂರು-ಸಾವಿರ ಮುಖಬೆಲೆ ನೋಟುಗಳ ಬ್ಯಾನ್ ಮಾಡಿ ಆದೇಶ ಹೊರಡಿಸಿದಾಗಿನಿಂದಲೂ ಪ್ರಧಾನಿ ನರೇಂದ್ರ ಮೋದಿಯವರ ಪರ-ವಿರೋಧ ಹೇಳಿಕೆ ಕೇಳಿ ಬರುತ್ತಿದೆ. ತರಕಾರಿ ಮಾರುವವರಿಂದ ಹಿಡಿದು ಸ್ಟಾರ್‌ ಸೆಲೆಬ್ರಿಟಿಗಳವರೆಗೆ ಪ್ರಧಾನಿ ಮೋದಿಯವರ ಈ ನಿರ್ಧಾರಕ್ಕೆ ತಮ್ಮದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಬಾಲಿವುಡ್ ನಟಿ- ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಇದೇ ಮೊದಲ ಬಾರಿಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದು, ಪ್ರಧಾನಿ ಮೋದಿಯವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓರ್ವ ನಾಗರಿಕಳಾಗಿ ಪ್ರಾಮಾಣಿಕವಾಗಿ ನಾನು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿರುವುದಾಗಿ ತಿಳಿಸಿರುವ ಐಶ್ವರ್ಯ ರೈ, ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಅಳಿಸಿ ಹಾಕಲು ದೊಡ್ಡ ಯೋಜನೆ ಕೈಗೊಂಡಿದ್ದೀರಿ. ಇದಕ್ಕೆ ನಿಜವಾಗಲೂ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.

ಏಕಾಏಕಿಯಾಗಿ ದೇಶಾದ್ಯಂತ ನೋಟು ಬ್ಯಾನ್ ಮಾಡಿ ಆದೇಶ ಹೊರಡಿಸಿರುವುದು ಕೆಲವರಿಗೆ ಸಮಸ್ಯೆಯನ್ನುಂಟು ಮಾಡಿದ್ದರೂ ಮುಂದಿನ ದಿನಗಳಲ್ಲಿ ಇದರಿಂದ ಅನೇಕ ಅನುಕೂಲಗಳಿವೆ ಎಂದು ಐಶ್ವರ್ಯ ಹೇಳಿಕೊಂಡಿದ್ದಾರೆ.