ಈಗ ಏರ್'ಟೆಲ್ ಮತ್ತೊಂದು ಉಚಿತ ಆಫರ್'ಅನ್ನು ಪ್ರಕಟಿಸಿದ್ದು

ಮುಂಬೈ(ಏ.16): ರಿಲಾಯನ್ಸ್ ಜಿಯೋ ಸರಣಿ ಉಚಿತ ಆಫರ್'ಗಳನ್ನು ಪ್ರಕಟಿಸಿದ ನಂತರ ಈಗ ಸರದಿಯಂತೆ ಉಳಿದ ಕಂಪನಿಗಳು ಉಚಿತ ಆಫರ್'ಗಳನ್ನು ಪ್ರಕಟಿಸುತ್ತವೆ.

ಈಗ ಏರ್'ಟೆಲ್ ಮತ್ತೊಂದು ಉಚಿತ ಆಫರ್'ಅನ್ನು ಪ್ರಕಟಿಸಿದ್ದು ಪ್ರಸ್ತುತ ಏಪ್ರಿಲ್ 13,2017ರವರೆಗೂ ಲಭ್ಯವಿದ್ದ 10 ಜಿಬಿ ಉಚಿತ ಇಂಟರ್'ನೆಟ್ ಆಫರ್'ಅನ್ನು ಮೂರು ತಿಂಗಳು ವಿಸ್ತರಿಸಿದೆ. ಚಂದದಾರರು ಈ ಸೌಲಭ್ಯವನ್ನು ಏ.30ರವರೆಗೂ ಆಕ್ಟಿ'ವೇಟ್ ಮಾಡಿಕೊಳ್ಳಬಹುದು.

ಈ ಆಫರ್ ಮೈ ಏರ್'ಟೆಲ್ ಆ್ಯಪ್ 'ನಲ್ಲಿ ಲಭ್ಯವಿದೆ.ಕಂಪನಿ ಇತ್ತೀಚಿಗಷ್ಟೆ ಪ್ರೀಪೇಯ್ಡ್ ಬಳಕೆದಾರರಿಗೆ 399 ರೂ.ಗಳಿಗೆ 70 ಜಿಬಿ ಇಂಟರ್'ನೆಟ್, ಅನಿಯಮಿತ ಸ್ಥಳೀಯ ಹಾಗೂ ಎಸ್'ಟಿಡಿ ಉಚಿತ ಕರೆಗಳನ್ನು ಪ್ರಕಟಿಸಿತ್ತು.