ಜೂನ್ ತಿಂಗಳಲ್ಲಿ ಹಳೆಯ ಉಚಿತ ಆಫರ್ ಇರುವ ಕಾರಣ ಇದು ಅಂತ್ಯವಾದ ನಂತರ ಜುಲೈ ತಿಂಗಳಿಂದ ಹೊಸ ಆಫರ್ ಅನ್ವಯವಾಗಲಿದೆ.
ಮುಂಬೈ(ಜೂ.24): ಜಿಯೋ'ಗೆ ಸ್ಪರ್ಧಿಯಾಗಿ ಭಾರತದ ಅತೀ ದೊಡ್ಡ ಟೆಲಿಕಾಂ ಕಂಪನಿ ಏರ್'ಟೆಲ್ಮತ್ತೆ 30 ಜಿಬಿ ಉಚಿತ ಡಾಟಾ' ಆಫರ್'ಅನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಿದೆ. ಈ ಆಫ ಮಾನ್'ಸೂನ್ ಸರ್'ಪ್ರೈಸ್ ಆಫರ್ ಎಂದು ಹೆಸರಿಡಲಾಗಿದೆ.
ಜೂನ್ ತಿಂಗಳಲ್ಲಿ ಹಳೆಯ ಉಚಿತ ಆಫರ್ ಇರುವ ಕಾರಣ ಇದು ಅಂತ್ಯವಾದ ನಂತರ ಜುಲೈ ತಿಂಗಳಿಂದ ಹೊಸ ಆಫರ್ ಅನ್ವಯವಾಗಲಿದೆ.ನೂತನ ಯೋಜನೆ ಜಾರಿಯ ಬಗ್ಗೆ ಏರ್'ಟೆಲ್ ಚಂದದಾರರಿಗೆ ಇಮೇಲ್'ಗಳಲ್ಲಿ ಮಾಹಿತಿ ನೀಡಲಾಗಿದೆ. ಪೋಸ್ಟ್'ಪೇಯ್ಡ್ ಚಂದದಾರರಿಗೂ ಪ್ರತಿ ತಿಂಗಳು 10 ಜಿಬಿಯಿರುವ 4ಜಿ ಡಾಟಾವನ್ನು 3 ತಿಂಗಳು ಸಹ ನೀಡಲಾಗುತ್ತದೆ.
ಚಂದದಾರರು ಮೈ ಏರ್'ಟೆಲ್ ಆ್ಯಪ್ ಮೂಲಕ ಈ ಆಫರ್ ಪಡೆದುಕೊಳ್ಳಬಹುದು' ಎಂದು ಏರ್'ಟೆಲ್ ಸಿಇಒ ಗೋಪಾಲ್ ವಿಠ್ಠಲ್ ತಿಳಿಸಿದ್ದಾರೆ. ಒಂದು ವೇಳೆ ಮೈ ಏರ್'ಟೆಲ್ ಆ್ಯಪ್ ನಿಮ್ಮ ಮೊಬೈಲ್'ನಲ್ಲಿ ಇಲ್ಲದಿದ್ದರೆ ಪ್ಲೇ ಸ್ಟೋರ್ ಮೂಲಕ ಡೌನ್'ಲೋಡ್ ಮಾಡಿಕೊಳ್ಳಬಹುದು.
