ಜೆಟ್ ಏರ್ವೇಸ್, ಏರ್'ಇಂಡಿಯಾ, ಗೋಏರ್, ಸ್ಪೈಸ್'ಜೆಟ್, ಇಂಡಿಗೋ ಏರ್'ಲೈನ್ಸ್ ಸಂಸ್ಥೆಗಳೂ ಕೂಡ ತಮ್ಮ ವಿಮಾನ ಪ್ರಯಾಣಕ್ಕೆ ಆಕರ್ಷಕ ಡಿಸ್ಕೌಂಟ್'ಗಳನ್ನು ನೀಡುತ್ತಿವೆ.

ನವದೆಹಲಿ(ಜ. 17): ದೇಶದ ವಿಮಾನ ಪ್ರಯಾಣ ಬೆಲೆ ಸಮರಕ್ಕೆ ಮತ್ತೊಂದು ಸಂಸ್ಥೆ ಅಖಾಡಕ್ಕೆ ಇಳಿದಿದೆ. ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ವಿಮಾನ ಪ್ರಯಾಣ ಸೌಲಭ್ಯ ಒದಗಿಸುವ ಏರ್'ಏಷ್ಯಾ ಸಂಸ್ಥೆ ಈಗ ಹೊಸ ವರ್ಷಕ್ಕೆ ಆಕರ್ಷಕ ಆಫರ್ ಒಡ್ಡಿದೆ. ಏರ್'ಏಷ್ಯಾದ ವಿಮಾನ ಟಿಕೆಟ್'ಗಳು 407 ರೂಪಾಯಿಯಿಂದ ಆರಂಭಗೊಳ್ಳಲಿವೆ. "2017 ಅರ್ಲಿ ಬರ್ಡ್ ಸೇಲ್" ಹೆಸರಿನಲ್ಲಿ ಕೊಡಲಾಗಿರುವ ಈ ಆಫರ್ ಜನವರಿ 22ರವರೆಗೆ ಮಾತ್ರವಿರುತ್ತದೆ. 2017ರ ಮೇ 1ರಿಂದ 2018ರ ಫೆಬ್ರವರಿ 6ರವರೆಗೆ ಯಾವುದೇ ದಿನದಂದು ನೀವು ಈ ಆಫರ್'ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.

ಇಂಫಾಲ್'ನಿಂದ ಗುವಾಹಟಿ ನಡುವೆ ವಿಮಾನ ಪ್ರಯಾಣದ ದರ 407 ರೂಪಾಯಿ ನಿಗದಿ ಮಾಡಲಾಗಿದೆ. ಇದು ಏರ್'ಏಷ್ಯಾ ಸಂಸ್ಥೆಯ ಕನಿಷ್ಠ ದರವಾಗಿದೆ. ಬೆಂಗಳೂರು-ಹೈದರಾಬಾದ್ ಮಾರ್ಗಕ್ಕೆ 663 ರೂ ಟಿಕೆಟ್ ದರವಿದೆ.

ಏರ್'ಏಷ್ಯಾ ದರಗಳು:
* ಬೆಂಗಳೂರು-ಹೈದರಾಬಾದ್: 663 ರೂ.
* ಬೆಂಗಳೂರು-ಪುಣೆ: 821 ರೂ.
* ಹೈದರಾಬಾದ್-ಗೋವಾ: 877 ರೂ.
* ಜೈಪುರ-ಪುಣೆ: 2,516

ಜೆಟ್ ಏರ್ವೇಸ್, ಏರ್'ಇಂಡಿಯಾ, ಗೋಏರ್, ಸ್ಪೈಸ್'ಜೆಟ್, ಇಂಡಿಗೋ ಏರ್'ಲೈನ್ಸ್ ಸಂಸ್ಥೆಗಳೂ ಕೂಡ ತಮ್ಮ ವಿಮಾನ ಪ್ರಯಾಣಕ್ಕೆ ಆಕರ್ಷಕ ಡಿಸ್ಕೌಂಟ್'ಗಳನ್ನು ನೀಡುತ್ತಿವೆ. ದೇಶೀಯವಾಗಿ ಭಾರತದಲ್ಲಿ ವೈಮಾನಿಕ ಪ್ರಯಾಣ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.