ಆಟೋಗಿಂತಲೂ ವಿಮಾನ ಪ್ರಯಾಣ ಅಗ್ಗ..!

Air travel cheaper than using auto Rickshaws
Highlights

ಆಟೋ ರಿಕ್ಷಾಕ್ಕೆ ತಗುಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ವಾತಾವರಣವನ್ನು ನಾವು ನಿರ್ಮಿಸಿದ್ದೇವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

ಇಂಧೋರ್: ಆಟೋ ರಿಕ್ಷಾಕ್ಕೆ ತಗುಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡುವ ವಾತಾವರಣವನ್ನು ನಾವು ನಿರ್ಮಿಸಿದ್ದೇವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

ಇಲ್ಲಿ ಕಾರ್ಯ ಕ್ರಮವೊಂದರಲ್ಲಿ ಮಾತನಾಡಿ, ‘ಪ್ರಸ್ತುತ ಭಾರತದಲ್ಲಿ ಆಟೋಗೆ ತಗುಲುವ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ವಿಮಾನ ಪ್ರಯಾಣ ಮಾಡಬಹುದು. ಇದಕ್ಕಾಗಿ ನನ್ನನ್ನು ಕೆಲವರು ಮೂರ್ಖ ಎನ್ನಬಹುದು.

ಆದರೆ, ಇದೇ ಸತ್ಯ. ಆಟೋ ಸಂಚಾರಕ್ಕೆ ಪ್ರತಿ ಕಿ.ಮೀಗೆ 8ರಿಂದ 10 ರು. ಪಾವತಿಸ ಬೇಕು. ಆದರೆ, ವಿಮಾನದಲ್ಲಿ ಪ್ರತಿ ಕಿ.ಮೀಗೆ 5 ರು.ನಂತೆ ಪ್ರಯಾಣಿಸಬಹುದಾಗಿದೆ’ ಎಂದರು ಸಚಿವ ಸಿನ್ಹಾ.

loader