ವಿಮಾನ ಹೊರಡುವುದನ್ನು ತಡ ಮಾಡುವ ಪ್ರಯಾಣಿಕರ ಮೇಲೆ ಕನಿಷ್ಟ ರೂ.5 ಲಕ್ಷದಿಂದ ಗರಿಷ್ಟ ರು.15 ಲಕ್ಷದವರೆಗೆ ದಂಡ ವಿಧಿಸಲು ಏರ್ ಇಂಡಿಯಾ ಚಿಂತನೆ ನಡೆಸಿದೆ.

ನವದೆಹಲಿ (ಏ.17): ವಿಮಾನ ಹೊರಡುವುದನ್ನು ತಡ ಮಾಡುವ ಪ್ರಯಾಣಿಕರ ಮೇಲೆ ಕನಿಷ್ಟ ರೂ.5 ಲಕ್ಷದಿಂದ ಗರಿಷ್ಟ ರು.15 ಲಕ್ಷದವರೆಗೆ ದಂಡ ವಿಧಿಸಲು ಏರ್ ಇಂಡಿಯಾ ಚಿಂತನೆ ನಡೆಸಿದೆ.

ಕಳೆದ ತಿಂಗಳು ಇಂದಿರಾ ಗಾಂಧಿ ಏರ್ ಪೋರ್ಟ್ ನಲ್ಲಿ ಶಿವಸೇನಾ ಸಂಸದ ರವೀಂದ್ರ ಗಾಯಕ್’ವಾಡ್ ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿ ಅಮಾನವೀಯವಾಗಿ ವರ್ತಿಸಿದ್ದರು. ಈ ಹಿನ್ನಲೆಯಲ್ಲಿ ಏರ್ ಇಂಡಿಯಾ ವಿಮಾನ ಹೊರಡಲು ವಿಳಂಬ ಮಾಡುವ ಪ್ರಯಾಣಿಕರ ಮೇಲೆ ದಂಡ ವಿಧಿಸಲು ಮುಂದಾಗಿದೆ.

ಒಂದು ತಾಸಿನವರೆಗೆ ವಿಮಾನ ವಿಳಂಬ ಮಾಡಿದರೆ ರೂ. 5 ಲಕ್ಷ ದಂಡ, 2 ತಾಸು ವಿಳಂಬ ಮಾಡಿದರೆ ರೂ. 10 ಲಕ್ಷ ಹಾಗೂ 2 ತಾಸಿಗಿಂತ ಹೆಚ್ಚು ವಿಳಂಬ ಮಾಡಿದರೆ 15 ಲಕ್ಷ ದಂಡ ವಿಧಿಸುವುದಾಗಿ ಏರ್ ಇಂಡಿಯಾ ಹೇಳಿದೆ.