ಏರ್ ಇಂಡಿಯಾದಲ್ಲಿ 'ಮಹಾರಾಜ' ಸೀಟು: ಏನೆಲ್ಲಾ ಹೊಸ ವಿನ್ಯಾಸ?

Air India set to have 'Maharaja' class seats on international flights
Highlights

ಏರ್ ಇಂಡಿಯಾದಲ್ಲಿ ಬರಲಿವೆ ಮಹಾರಾಜ ಸೀಟು

ಹೊಸ ಭಕ್ಷ್ಯಗಳು, ಸಿಬ್ಬಂದಿಗೆ ಹೊಸ ಸಮವಸ್ತ್ರ

ವಿನ್ಯಾಸ ಮತ್ತು ಮೂಲಸೌಕರ್ಯ ಮೇಲ್ದರ್ಜೆಗೆ

ಪರಿಷ್ಕೃತ ಮಹಾರಾಜ ಬ್ಯುಸಿನೆಸ್ ಸೀಟುಗಳು

ನವದೆಹಲಿ(ಜೂ.21): ಏರ್ ಇಂಡಿಯಾ ವಿಮಾನದಲ್ಲಿ ವಿದೇಶಗಳಿಗೆ ಪ್ರಯಾಣಿಸುವವರು ಇನ್ನು ಮುಂದೆ ಹೊಸ ಅನುಭವ ಪಡೆಯಬಹುದಾಗಿದೆ. ಏರ್ ಇಂಡಿಯಾ ಸದ್ಯದಲ್ಲಿಯೇ ಮಹಾರಾಜ ಬ್ಯುಸಿನೆಸ್  ದರ್ಜೆಯ ಸೀಟುಗಳು, ವಿಮಾನದಲ್ಲಿ ಹಲವು ಹೊಸ ಭಕ್ಷ್ಯಗಳು ಮತ್ತು ಸಿಬ್ಬಂದಿಗೆ ಹೊಸ ಸಮವಸ್ತ್ರಗಳನ್ನು ಜಾರಿಗೆ ತರಲಿದೆ.

ಈ ಮೂಲಕ ವಿಮಾನದಲ್ಲಿನ ವಿನ್ಯಾಸ ಮತ್ತು ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನೂತನ ಸೇವೆ ನಾಳೆಯಿಂದ ಜಾರಿಗೆ ಬರಲಿದ್ದು, ನಷ್ಟದಲ್ಲಿರುವ ಏರ್ ಇಂಡಿಯಾದಿಂದ ಹೂಡಿಕೆಯನ್ನು ಹಿಂತೆಗೆದುಕೊಳ್ಳಲು ಸರ್ಕಾರ ಯೋಜಿಸುತ್ತಿರುವ ಸಂದರ್ಭದಲ್ಲಿ ಈ ಹೊಸ ಸೌಕರ್ಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವುದು ಗಮನ ಸೆಳೆದಿದೆ.

ಮಹಾರಾಜ ದರ್ಜೆಯ ಸೀಟುಗಳನ್ನು ಏರ್ ಇಂಡಿಯಾದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ. ಬೋಯಿಂಗ್ 777 ಮತ್ತು 787 ವಿಮಾನಗಳಲ್ಲಿ ಈಗಿರುವ ಬ್ಯುಸಿನೆಸ್ ದರ್ಜೆಯ ಸೀಟುಗಳನ್ನು ಪರಿಷ್ಕರಿಸಿ ಮಹಾರಾಜ ಬ್ಯುಸಿನೆಸ್ ದರ್ಜೆಯ ಸೀಟುಗಳನ್ನಾಗಿ ಬದಲಾಯಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಸಣ್ಣ ಮತ್ತು ದೀರ್ಘಾವಧಿಯ ಅಂತಾರಾಷ್ಟ್ರೀಯ ವಾಯುಮಾರ್ಗಗಳಲ್ಲಿ ಈ ವಿಮಾನಗಳು ಹಾರಾಟ ನಡೆಸಲಿವೆ. ಪ್ರಸ್ತುತ ಏರ್ ಇಂಡಿಯಾ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಶೇಕಡಾ 17ರಷ್ಟು ಮಾರುಕಟ್ಟೆ ಷೇರುಗಳನ್ನು ಒಳಗೊಂಡಿದೆ. ಪ್ರತಿ ವಾರಕ್ಕೆ 2,500 ಅಂತಾರಾಷ್ಟ್ರೀಯ ಸ್ಲಾಟ್ ಗಳನ್ನು ಹೊಂದಿದ್ದು 43 ವಿದೇಶಿ ಸ್ಥಳಗಳಿಗೆ ಸಂಚರಿಸುತ್ತದೆ.

loader