ಅಹ್ಮದಾಬಾದ್ ನಿಂದ ಹೊರಟ ಏರ್ ಇಂಡಿಯಾ ವಿಮಾನ ಎಐ-171 ಹಂಗೇರಿಯಲ್ಲಿ ಹಾರಾಡುವಾಗ ಏರ್ ಟ್ರಾಫಿಕ್ ನಿಯಂತ್ರಣವನ್ನು ತಪ್ಪಿದೆ. ಬಳಿಕ ಹಂಗೇರಿಯ ಫೈಟರ್ ಜೆಟ್ ನ್ನು ನಿಯೋಜಿಸಲಾಗಿದ್ದು ವಿಮಾನವನ್ನು ರಕ್ಷಿಸಲಾಗಿದೆ.
ನವದೆಹಲಿ (ಮಾ.10): ಅಹ್ಮದಾಬಾದ್ ನಿಂದ ಹೊರಟ ಏರ್ ಇಂಡಿಯಾ ಫ್ಲೈಟ್ ಎಐ-171 ಹಂಗೇರಿಯಲ್ಲಿ ಹಾರಾಡುವಾಗ ಏರ್ ಟ್ರಾಫಿಕ್ ನಿಯಂತ್ರಣವನ್ನು ತಪ್ಪಿದೆ. ಬಳಿಕ ಹಂಗೇರಿಯ ಫೈಟರ್ ಜೆಟ್ ನ್ನು ನಿಯೋಜಿಸಲಾಗಿದ್ದು ವಿಮಾನವನ್ನು ರಕ್ಷಿಸಲಾಗಿದೆ.
ವಿಮಾನದಲ್ಲಿ ಒಟ್ಟು 231 ಮಂದಿ ಪ್ರಯಾಣಿಕರಿದ್ದು 18 ಮಂದಿ ಸಿಬ್ಬಂದಿಗಳಿದ್ದರು ಎನ್ನಲಾಗಿದೆ.
ಫ್ರೀಕ್ವೆನ್ಸಿ ಏರಿಳಿತದಿಂದ ವಿಮಾನವು ಸಂಪರ್ಕವನ್ನು ಕಳೆದುಕೊಂಡಿತು. ಇದೀಗ ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಗಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರ ತಿಳಿಸಿದ್ದಾರೆ.
