Asianet Suvarna News Asianet Suvarna News

ರಾಷ್ಟ್ರಪತಿ ಕೋವಿಂದ್‌ ವಿಮಾನದಲ್ಲಿ ತಾಂತ್ರಿಕ ದೋಷ: ತನಿಖೆಗೆ ಆದೇಶ!

ರಾಷ್ಟ್ರಪತಿ ಕೋವಿಂದ್‌ ವಿಮಾನದಲ್ಲಿ 3 ಗಂಟೆ ತಾಂತ್ರಿಕ ತೊಂದರೆ: ತನಿಖೆಗೆ ಏರಿಂಡಿಯಾ ಆದೇಶ| ಸ್ವಿಜರ್ಲೆಂಡ್‌ನ ಜ್ಯೂರಿಚ್‌ನಿಂದ ಸ್ಲೊವೇನಿಯಾಗೆ ಪ್ರಯಾಣಿಸುವ ವೇಳೆ ಘಟನೆ

Air India Orders Inquiry Into President Kovind Flight Delay At Zurich
Author
Bangalore, First Published Sep 17, 2019, 11:33 AM IST

ನವದೆಹಲಿ[ಸೆ.17]: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಅಧಿಕೃತ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದು 3 ಗಂಟೆ ಪ್ರಯಾಣ ವಿಳಂಬವಾಗಿದ್ದು, ಏರಿಂಡಿಯಾ ಈ ಕುರಿತು ತನಿಖೆಗೆ ಆದೇಶಿಸಿದೆ.

ಕೋವಿಂದ್‌ ಅವರು ಸ್ವಿಜರ್ಲೆಂಡ್‌ನ ಜ್ಯೂರಿಚ್‌ನಿಂದ ಸ್ಲೊವೇನಿಯಾಗೆ ತಮ್ಮ ವಿಶೇಷ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಈ ವೇಳೆ ಇದ್ದಕ್ಕಿದ್ದಂತೆ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ.

ಇದರ ದುರಸ್ತಿಗೆ ಸುಮಾರು 3 ಗಂಟೆ ತಗುಲಿದೆ. ಹೀಗಾಗಿ ಏರ್‌ಪೋರ್ಟ್‌ಗೆ ಆಗಮಿಸಿದ ಕೋವಿಂದ್‌ ಅವರು ವಿಮಾನದಲ್ಲಿ ಸಮಸ್ಯೆ ಉಂಟಾದ್ದರಿಂದ ಮರಳಿ ಹೋಟೆಲ್‌ಗೆ ಪ್ರಯಾಣಿಸಬೇಕಾಯಿತು. ರಾಷ್ಟ್ರಪತಿ ಪ್ರಯಾಣಕ್ಕೆ ಅಡಚಣೆ ಉಂಟಾದ ಕಾರಣ ಏರಿಂಡಿಯಾ ತನಿಖೆಗೆ ಆದೇಶಿಸಿದೆ.

Follow Us:
Download App:
  • android
  • ios