ರೈಲ್ವೇ ಬೋರ್ಡ್ ಚೇರ್’ಮನ್ ಸ್ಥಾನಕ್ಕೆ ಎಕೆ ಮಿತ್ತಲ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಏರ್ ಇಂಡಿಯಾ ಮಾಜಿ ಚೇರ್’ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶ್ವಾನಿ ಲೋಹಾನಿಯನ್ನು ನೇಮಕ ಮಾಡಲಾಗಿದೆ.
ನವದೆಹಲಿ (ಆ.23): ರೈಲ್ವೇ ಬೋರ್ಡ್ ಚೇರ್’ಮನ್ ಸ್ಥಾನಕ್ಕೆ ಎಕೆ ಮಿತ್ತಲ್ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಏರ್ ಇಂಡಿಯಾ ಮಾಜಿ ಚೇರ್’ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶ್ವಾನಿ ಲೋಹಾನಿಯನ್ನು ನೇಮಕ ಮಾಡಲಾಗಿದೆ.
ಅಶ್ವಾನಿ ಲೋಹಾನಿ ಏರ್ ಇಂಡಿಯಾದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಜೊತೆಗೆ ರೈಲ್ವೇಯಲ್ಲಿ ಮೆಕಾನಿಕಲ್ ಎಂಜಿನೀಯರ್ ಆಗಿ ಕೂಡಾ ಸೇವೆ ಸಲ್ಲಿಸಿದ್ದಾರೆ.ಪ್ರಧಾನ ಮಂತ್ರಿ ಕಾರ್ಯಾಲಯದ ಜೊತೆ ನಿಕಟಪೂರ್ವ ಸಂಬಂಧ ಹೊಂದಿದ್ದಾರೆನ್ನಲಾಗಿದೆ.
ಕೈಫಿಯತ್ ಎಕ್ಸ್’ಪ್ರೆಸ್ ದುರಂತ ಹಾಗೂ ಉತ್ಕಾಲ್ ರೈಲು ದುರಂತಕ್ಕೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು. ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಶ್ವಾನಿ ಲೋಹಾನಿಯನ್ನು ನೇಮಕ ಮಾಡಲಾಗಿದೆ.
