ಪಣಜಿ : ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ  ಮನೋಹರ್ ಪರ್ರಿಕರ್ ಭಾನುವಾರ ಸಾರ್ವಜನಿಕವಾಗಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ. ಆದರೆ ಈ ವೇಳೆ ಅವರಿಗೆ ಮೂಗಿನಲ್ಲಿ ಹಾಕಿದ ನಳಿಕೆಯು ಇದ್ದು, ಬೇರೆಯವರ ಸಹಾಯದೊಂದಿಗೆ ನಡೆದಾಡುತ್ತಿದ್ದರು. . 

 ಮಾಂಡೋವಿ ನದಿಯ ಸೇತುವೆಯನ್ನು ಪರಿಶೀಲನೆ ನಡೆಸಿದ್ದು,  ಈ ನಿಟ್ಟಿನಲ್ಲಿ ಹಲವು ವಿಪಕ್ಷ ಮುಖಂಡರು ಕುಹಕವಾಡಿದ್ದಾರೆ. 

ಅನಾರೋಗ್ಯಕ್ಕೆ ಒಳಗಾದ ಮುಖ್ಯಮಂತ್ರಿ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಗ್ಗೆ ಟ್ವೀಟ್ ಮಾಡಿರುವ  ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ,  ಮೂಗಿನಲ್ಲಿ ನಳಿಕೆ ಹಾಕಿದ್ದು, ಇಷ್ಟು ಅನಾರೋಗ್ಯದಲ್ಲಿಯೂ ಕೆಲಸದಲ್ಲಿ ಪಾಲ್ಗೊಂಡಿದ್ದಾರೆ.  ಯಾಕೆ ಇಂತಹ ಸಂದರ್ಭದಲ್ಲಿಯೂ ಕೆಲಸ ಮಾಡುವ ಒತ್ತಡ ಹಾಕಿ ತಮಾಷೆ ನೋಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಅನೇಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು,  ಇದೇನಿದು ಅಧಿಕಾರದ ವ್ಯಾಮೋಹ, ಇಂತಹ ಸಂದರ್ಭದಲ್ಲಿಯೂ ರಾಜೀನಾಮೆ ನೀಡಲು ಬಿಡದೇ ಕೆಲಸ ಮುಂದುವರಿಸುವಂತೆ ಒತ್ತಡ ಹಾಕುತ್ತಿರುವುದು ಅಮಾನವೀಯ ಎಂದು ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಆಸ್ಪತ್ರೆಯಿಂದ ಎದ್ದು ಬಂದು ಕಾಮಾಗಾರಿ ವೀಕ್ಷಿಸಿದ ಸಿಎಂ ಪರಿಕ್ಕರ್

63 ವರ್ಷದ ಗೋವಾ ಸಿಎಂ ಮನೋಹರ್ ಪರ್ರಿಕ್ಕರ್ ಅವರಿಗೆ ಪ್ಯಾಂಕ್ರಿಯಾಟಿಕ್ ಸಮಸ್ಯೆ ಹಿನ್ನೆಲೆ  ಸರ್ಜರಿ ನಡೆಸಲಾಗಿದ್ದು, ಅದಾದ ಬಳಿಕ ದಿಲ್ಲಿಯ ಏಮ್ಸ್ ಗೆ ದಾಖಲಿಸಿ ಹಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. 

ಮೊದಲ ಬಾರಿಗೆ ಹೊರಕ್ಕೆ ಬಂದ ಪರ್ರಿಕ್ಕರ್ ಅವರು ನಿರ್ಮಾಣ ಹಂತದ ಸೇತುವೆಯನ್ನು ಪರಿಶೀಲನೆ ನಡೆಸಿದ್ದರು. ಸ್ಥಳದಲ್ಲಿಯೇ ಕಾರು ನಿಲ್ಲಿಸಿ ಅಲ್ಲಿನ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಅವರೊಂದಿಗೆ ಸಹಾಯಕ್ಕೆ ಅನೇಕರು ಇದ್ದು, ಇಬ್ಬರೂ ವೈದ್ಯರು ಕೂಡ ಮುಖ್ಯಮಂತ್ರಿಯೊಂದಿಗೆ ಇದ್ದರು.