Asianet Suvarna News Asianet Suvarna News

ಕಾಂಗ್ರೆಸ್ಸಿಗೆ ನೆಹರು-ಗಾಂಧಿ ಹೆಸರಿಲ್ಲದ ಅಧ್ಯಕ್ಷರ ಅಗತ್ಯವಿದೆ!

ಕಾಂಗ್ರೆಸ್ ಗಮನ ನೀಡುವುದಕ್ಕೆ ಅರ್ಹವಾದ ಅಲ್ಲಿ ಇಲ್ಲಿ ತೇಲುತ್ತಿರುವ ಅಧಿಕಾರ ಕೇಂದ್ರಗಳು ಇನ್ನೂ ಇವೆ: ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ, ರಾಜ್ ಠಾಕ್ರೆ. ದೊಡ್ಡಣ್ಣನ ಹವೆಯಿಂದ ಕಾಂಗ್ರೆಸ್‌ ಕೆಳಗಿಳಿದರೆ
ಮಾತ್ರ ಇತರರೊಂದಿಗೆ ಸಮಾನ ವೇದಿಕೆಯಲ್ಲಿ ಕೆಲಸ ಮಾಡಬಹುದು. 

AICC needs president from Non Gandhi Nehru Family
Author
Bengaluru, First Published Jun 2, 2019, 12:37 PM IST

ಕಾಂ ಗ್ರೆಸ್ ಪಕ್ಷದ ಅತ್ಯಂತ ತಲೆತಗ್ಗಿಸು ವಂಥ ಸಮಯದಲ್ಲಿ ರಾಹುಲ್ ಗಾಂಧಿ ಧಾರ್ಷ್ಟ್ಯದ ಮತ್ತು ದೃಢನಿಶ್ಚಯದ ಒಂದು ಏಟನ್ನು ನೀಡಿದ್ದಾರೆ. ತಮ್ಮ ಕೆಲವು ಹಿರಿಯ ಸಹೋದ್ಯೋಗಿಗಳ ಸ್ವಾರ್ಥತನವನ್ನು ಬಹಿರಂಗಪಡಿಸುವ ಧೈರ್ಯವನ್ನು ಅವರು ತೋರಿಸಿದ್ದಾರೆ. ಕಾಂಗ್ರೆಸ್ಸಿಗೆ ನೆಹರು-ಗಾಂಧಿ ಹೆಸರಿಲ್ಲದ ಅಧ್ಯಕ್ಷರೊಬ್ಬರ ಅಗತ್ಯವಿದೆ ಎಂದು ಅವರು ಹೇಳಿದಾಗ ರಾಜೀನಾಮೆಯ ವಿಷಯದಲ್ಲಿ ಅವರ ದೃಢ ನಿರ್ಧಾರ ಸೂಕ್ಷ್ಮ ವಿವೇಚನೆಯಿಂದ ಕೂಡಿದ್ದು ಎನಿಸಿತು. 

ರಾಜಕಾರಣಿಗಳು ದೇಶಕ್ಕಿಂತ ಮೊದಲು ತಮ್ಮನ್ನು ಪರಿಗಣಿಸಿಕೊಳ್ಳುವುದು ನಮ್ಮ ಕಾಲದ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಸಂಬಂಧದಲ್ಲಿ ಪಕ್ಷದ ಅಧ್ಯಕ್ಷರು ಯಾವತ್ತೂ ಯಾರ ಹೆಸರನ್ನೂ ಹೇಳಿರಲಿಲ್ಲ. ಆದರೆ ರಾಹುಲ್ ಅದನ್ನು ಹೇಳಿದರು.

ಇತ್ತೀಚೆಗಷ್ಟೇ ಮುಕ್ತಾಯ ವಾದ ಚುನಾವಣೆಯಲ್ಲಿ ತಮ್ಮ ಮಗನಿಗೆ ಟಿಕೆಟ್ ನೀಡದೆ ಇದ್ದರೆ ಪಕ್ಷ ತೊರೆಯುವ ಬೆದರಿಕೆಯನ್ನು ಪಿ.ಚಿದಂಬರಂ ಹಾಕಿದರು. ಕಮಲನಾಥ್ ಅವರೂ ತಮ್ಮ ಮಗನಿಗೆ ಟಿಕೆಟ್‌ಗೆ ಒತ್ತಡ ತಂದರು ಎಂಬುದನ್ನೂ ಅವರು ಬಹಿರಂಗ ಪಡಿಸಿದರು.

ಹಟಕ್ಕೆ ಬಿದ್ದ ಮತ್ತೊಬ್ಬ ತಂದೆ ಅಶೋಕ್ ಗೆಹ್ಲೋಟ್ ತಮ್ಮ ಮಗನಿಗೆ ಟಿಕೆಟ್ ಪಕ್ಕಾ ಆಗು ವವರೆಗೂ ದೆಹಲಿಯಲ್ಲೇ ಠಿಕಾಣಿ ಹೂಡಿದ್ದರು. ಗೆಹ್ಲೋಟ್ ಮಗ ಗೆಲ್ಲಲೂ ಇಲ್ಲ. ಗೆಲವು ಸಾಧಿ ಸಿದ ಚಿದಂಬರಂ ಮಗ ಯಾರು? ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಒಬ್ಬ ವಿವಾ ದಿತ ಪಿತೂರಿಗಾರ ಮತ್ತು ಸುಪ್ರೀಂಕೋರ್ಟ್‌ನ ಅನುಮತಿ ಇಲ್ಲದೆ ವಿದೇಶಕ್ಕೆ ಹೋಗದಂತೆ ನಿರ್ಬಂಧಿಸಲ್ಪಟ್ಟವ. ಈ ಮಗನ ಅಭ್ಯರ್ಥಿತನವನ್ನು ರಾಹುಲ್ ಗಾಂಧಿ ತಿರಸ್ಕರಿಸಿದ್ದರೆ ಇದು ಪೀಡೆ ತೊಲಗಿತೆಂಬ ಇಮ್ಮಡಿ ಖುಷಿಯ ವಿಚಾರವಾಗಿತ್ತು.

ಗಾಂಧಿಯಲ್ಲದವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಬೇಕು ಎಂಬುದು ಒಂದು ವಿಚಾರ, ಅದರ ಕಾಲ ಈಗ ಬಂದಿದೆ. ಪಕ್ಷದೊಳ ಗಿನ ಬಡಿದಾಡುವ ಬಣಗಳನ್ನು ಒಂದುಗೂಡಿ ಸಲು ಒಂದು ಕುಟುಂಬ ಬೇಕು, ಎಲ್ಲ ಬಣಗಳು ಆ ಕುಟುಂಬಕ್ಕೆ ಮಣಿಯುತ್ತವೆ ಎಂಬುದು ಇಷ್ಟು ವರ್ಷಗಳ ವಾದವಾಗಿತ್ತು.

ಪರಸ್ಪರ ಜಗಳದಲ್ಲಿ ನಿರತರಾಗಿದ್ದ ಕಾಂಗ್ರೆಸ್‌ನ ಹಿರಿಯರಿಗೆ ಇದು ಒಂದು ಸೇಫ್ಟಿ ವಾಲ್ವ್ ಒದಗಿಸಿತ್ತು. ಆದರೆ ಶಕ್ತಿ ಶಾಲಿಯಾದ ಬಿಜೆಪಿಯ ಉದಯ ಈ ಆಟವನ್ನು ಬದಲಿಸಿದೆ. ಕಳೆದುಹೋದ ವರ್ಷಗಳಲ್ಲಿ ಕುಟುಂಬದ ಹಣೆಪಟ್ಟಿ ಗಳಿಸಿದುದಕ್ಕಿಂತ ವಿಸ್ತಾರವಾದ ಸಮೂಹ ನೆಲೆಯ ಬೆಂಬಲವನ್ನು ಗಳಿಸುವುದು ಕಾಂಗ್ರೆಸ್‌ಗೆ ಈಗ ಅಸ್ತಿತ್ವದ ಅನಿವಾರ್ಯತೆಯಾಗಿದೆ

ರಾಹುಲ್‌ಗೆ ಇದರ ಅರಿವಾಗಿದೆ. ಅದನ್ನು ಅಂಗೀಕರಿಸಿಯೂ ಇದ್ದಾರೆ ಮತ್ತು ಅದರತ್ತ ಕ್ರಮ ಕೈಗೊಳ್ಳುವಂತೆಯೂ ತೋರುತ್ತದೆ. ಆದರೆ ಇದರಲ್ಲಿಯ ಅತ್ಯಂತ ಕಠಿಣವಾದ ಭಾಗವೆಂದರೆ ಹೊಸ ರೀತಿಯ ಕಾಂಗ್ರೆಸ್ಸನ್ನು ಹೊಸ ರೀತಿಯ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವುದಕ್ಕೆ ಮೊದಲು ಬೆಳೆಸಬೇಕಾಗಿದೆ.

ಅದೊಂದು ಸ್ವಾಭಾವಿಕ ಪ್ರಕ್ರಿಯೆಯಾಗಿ ತೋರಬೇಕೇ ವಿನಾ ಯಾರದೋ ನಿರ್ದೇಶನದಂತೆ ನಡೆಯುತ್ತಿದೆ ಎಂದು ಭಾಸವಾಗಬಾರದು. ಇದು ರಾಹುಲ್ ಅಧ್ಯಕ್ಷತೆಯಲ್ಲಿ ಚೆನ್ನಾಗಿ ಆಗಬಲ್ಲುದು, ಅವರು ಗಾಂಧಿ ಕುಟುಂಬದವರು ಎನ್ನುವ ಕಾರಣಕ್ಕಾಗಿ ಯಲ್ಲ, ಕಳೆದ ಐದಕ್ಕೂ ಹೆಚ್ಚು ವರ್ಷಗಳಲ್ಲಿ ಅವರು ವಿವೇಕ ಮತ್ತು ಬದ್ಧತೆಯನ್ನು ತೋರಿಸಿ ಗಳಿಸಿದ ವಿಶ್ವಾಸಾರ್ಹತೆಯಿಂದ.

ನಿಜಕ್ಕೂ ಅವರ ನಾಯಕತ್ವದ ಗುಣಗಳು ಬೆಳಕಿಗೆ ಬಂದದ್ದು ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ. ಸಾಂಸ್ಥಿಕ ಸುಧಾರ ಣೆಗಾಗಿ ಅವರು ಒಂದು ಪರಿಕಲ್ಪನೆಯನ್ನು ಮಾಡಿಕೊಂಡಿದ್ದರು. ಯುವ ಕಾಂಗ್ರೆಸ್ ಮತ್ತು ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಪುನರುಜ್ಜೀವನಗೊಳಿಸಿದರು.

ಚುನಾವಣಾ ಆಯೋಗ ದಲ್ಲಿ ಕೆಲಸ ಮಾಡಿದ್ದ ಪರಿಣತ ಹಿರಿಯರಾದ ಜೆ.ಎಂ.ಲಿಂಗ್ಡೋ ಮತ್ತು ಕೆ.ಜೆ.ರಾವ್ ಅವರ ಸಾಮರ್ಥ್ಯವನ್ನು ನೆರವಿಗೆ ಬಳಸಿಕೊಂಡರು. ಆ ಕಾಲದಲ್ಲಿ ಅತ್ಯಾಧುನಿಕ ಎನ್ನಿಸಿದ್ದ ಅಂಕಿಅಂಶಗಳ ವಿಶ್ಲೇಷಣೆಯನ್ನು ನಡೆಸಿದರು. ಅಂಥ ಕ್ರಮಕ್ಕೆ ಮರಳುವುದೇ ಇಂದಿನ ಅಗತ್ಯ. ಏಕೆಂದರೆ ರಾಜ ಕೀಯ ಪಕ್ಷಗಳಿಗೆ ಬೂತ್ ಮಟ್ಟದ ಕಾರ್ಯ ತಂತ್ರಗಳು ಮಹತ್ವದ್ದಾಗಿವೆ. ಕಾಂಗ್ರೆಸ್ ಪಕ್ಷವು ಆಧುನಿಕ ತಂತ್ರಜ್ಞಾನಗಳಾದ ಫೇಸ್‌ಬುಕ್ ಗ್ರೂಪ್‌ಗಳು, ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಗಳು ಮತ್ತು ಅಂಕಿಅಂಶಗಳ ಮುನ್ನಂದಾಜುಗಳು ಇವನ್ನೆಲ್ಲ ವ್ಯಾಪಕವಾಗಿ ಬಳಸಿಕೊಳ್ಳಬೇಕು

ಮತ್ತೂ ಮುಖ್ಯವಾದುದೆಂದರೆ ಮೈತ್ರಿಕೂಟ ಬೆಸೆಯುವುದು. ಸ್ವತಃ ಬಿಜೆಪಿಗೇ ಇದು ಅರಿ ವಾಗಿದೆ. ಅದಕ್ಕಾಗಿಯೇ ಅದು ರಾಮವಿಲಾಸ್ ಪಾಸ್ವಾನ್‌ರ ಪಕ್ಷದಂಥ ಚಿಕ್ಕಪುಟ್ಟ ಪಕ್ಷಗಳೊಂದಿಗೂ ಸ್ಥಾನ ಹಂಚಿಕೊಂಡಿತ್ತು. ಕಾಂಗ್ರೆಸ್ ಮರಳಿ ಸಂಬಂಧ ಸ್ಥಾಪಿಸಬಹುದಾದ ಸ್ವಾಭಾವಿಕವಾದ ಮಿತ್ರರು ಇದ್ದಾರೆ. ಎನ್‌ಸಿಪಿ ಮತ್ತು ವೈಎಸ್ ಆರ್‌ಸಿ ಎರಡರ ಹೆಸರಲ್ಲೂ ‘ಸಿ’ (ಕಾಂಗ್ರೆಸ್) ಎಂಬುದು ಸಾಮಾನ್ಯವಾಗಿದೆ. ಈಗ ನಡೆಯು ತ್ತಿರುವ ವಿದ್ಯಮಾನಗಳ ಕುರಿತು ಎನ್‌ಸಿಪಿಯ ಶರದ್ ಪವಾರ್ ಅತೃಪ್ತರಾಗಿದ್ದಾರೆ ಎಂದು ತಿಳಿದಿದೆ.

ವೈಎಸ್‌ಆರ್‌ಸಿಯ ಜಗನ್ಮೋಹನ ರೆಡ್ಡಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಂಥ ಕೇಂದ್ರ ಸರ್ಕಾರದೊಂದಿಗೆ ಸಂಬಂಧ ಗಟ್ಟಿಗೊಳಿಸಿ ಕೊಳ್ಳಬೇಕಾಗಿದೆ. ಆದರೆ ಅವರು ಕಾಡಿನಲ್ಲಿ ಬಿಟ್ಟ ಕುರಿಮರಿಯಂತಿದ್ದಾರೆ. ಅವರು ಒಂದು ಕಡೆ ತಿರುಗಿದರೆ ಬಿಜೆಪಿಯ ಹುಲಿ ಅವರನ್ನು ಮುಗಿಸಿ ಬಿಡುತ್ತದೆ, ಇನ್ನೊಂದು ಕಡೆ ತಿರುಗಿದರೆ ಕೆಸಿಆರ್ ತೋಳ ಅವರನ್ನು ನುಂಗಿಹಾಕುತ್ತದೆ. ಅವರೆದು ರಿಗೆ ಇರುವ ಏಕೈಕ ದಾರಿ ಎಂದರೆ ತಮ್ಮ ನೆಲೆ ಯಲ್ಲಿ ತಮಗೆ ಬಲವನ್ನು ತುಂಬಬಲ್ಲವ ರೊಂದಿಗೆ ಗಟ್ಟಿಯಾಗಿ ನಿಲ್ಲುವುದು

ವೈ.ಎಸ್.ರಾಜಶೇಖರ ರೆಡ್ಡಿಯವರ ಚುಂಬಕ ಸದೃಶ ವ್ಯಕ್ತಿತ್ವವು ಆಂಧ್ರ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಸವಾಲಿಲ್ಲದ ಬಲವನ್ನಾಗಿ ಕಟ್ಟಲು ನೆರವಾಗಿತ್ತು. ಅವರ ನಿಧನದ ಬಳಿಕ ಸೋನಿಯಾ ಗಾಂಧಿಯವರು ಕೆಲವು ಮೂರ್ಖ ಸಲಹೆಗಾರರ ಮೂರ್ಖ ಸಲಹೆಗಳನ್ನು ಅಂಗೀಕರಿಸಿದ್ದರಿಂದ ಆಂಧ್ರ ಭಾಗದಿಂದ ಕಾಂಗ್ರೆಸ್ ಮಾಯವಾಗಲು ದಾರಿಯಾಯಿತು.

ವೈಎಸ್‌ಆರ್ ಮಗ ಜಗನ್‌ಗೆ ಖಟ್ಟಹೇಳುವುದಕ್ಕೆ ಸೋನಿಯಾ ಗಾಂಧಿಗೆ ಇದು ಸಕಾಲ. ತಮ್ಮ ಸ್ವಂತ ಬಲದ ಮೇಲೆಯೇ ಅವರು ಪವಾಡ ಪುರುಷ ಆದರು. ವೈಫಲ್ಯದ ಹೊಂಡದಿಂದ ಅವರು ತಮ್ಮ ಕಠಿಣ ದುಡಿಮೆಯ ಮೂಲಕ ತಮ್ಮನ್ನು ಮೇಲಕ್ಕೆ ಎತ್ತಿಕೊಂಡರು ಮತ್ತು ಪಟ್ಟುಬಿಡದೆ ಜನರ ನಾಯಕನಾಗಿ ಉದ್ಭವವಾದರು.

ಗಮನ ನೀಡುವುದಕ್ಕೆ ಅರ್ಹವಾದ ಅಲ್ಲಿ ಇಲ್ಲಿ ತೇಲುತ್ತಿರುವ ಅಧಿಕಾರ ಕೇಂದ್ರಗಳು ಇನ್ನೂ ಇವೆ: ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ, ರಾಜ್ ಠಾಕ್ರೆ. ಕಾಂಗ್ರೆಸ್ ಪಕ್ಷವು ಹಿಂದಿನ ದೊಡ್ಡಣ್ಣನ ಹವೆಯಿಂದ ಮುಕ್ತವಾದರೆ ಇತರರೊಂದಿಗೆ ಸಮಾನ ವೇದಿಕೆಯಲ್ಲಿ ಜತೆಯಲ್ಲಿ ಕೆಲಸ ಮಾಡಬಹುದು.

ಆಳುವ ಪಕ್ಷವು ತನ್ನ ಪಕ್ಷಪಾತಿ ಹಿತಾಸಕ್ತಿಗಳನ್ನು ಸರ್ಕಾರದ ಸಂಸ್ಥೆಗಳ ಮೂಲಕ ಬೆಳೆಸಲು ನಿರ್ದಯಿಯಾದರೆ ಇದು ಅತ್ಯಗತ್ಯವಾದುದು. ಪ್ರಬಲ ಪ್ರತಿಪಕ್ಷದ ಅನುಪಸ್ಥಿತಿಯು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗುತ್ತದೆ. ಕಳೆದ ವಾರ ರಾಹುಲ್ ಗಾಂಧಿ ಶರದ್ ಪವಾರ್ ಅವರನ್ನು ಭೇಟಿ ಮಾಡಿರುವುದು ಒಳ್ಳೆಯ ಆರಂಭ. ಇವುಗಳ ನಡುವೆಯೇ ಇಂಥ ಉಪಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಗಾಂಧಿಯೇತರ ಅಧ್ಯಕ್ಷರ ಕಡೆಗೆ ಸಜ್ಜುಗೊಳಿಸುತ್ತವೆ.

- ಟಿ ಜೆ ಎಸ್ ಜಾರ್ಜ್ 

Follow Us:
Download App:
  • android
  • ios