ಎರಡೆಲೆ ಚಿಹ್ನೆಗಾಗಿ ಹೋರಾಟ ಮಾಡಿದ್ದ ಎಐಎಡಿಎಂಕೆಗೆ ಹಿನ್ನಡೆಯಾಗಿದೆ. ಎರಡೆಲೆ ಚಿಹ್ನೆಯನ್ನು ಚುನಾವಣಾ ಆಯೋಗ ಓ ಪನ್ನೀರ್ ಸೆಲ್ವಂ ಬಣಕ್ಕೆ ನೀಡಿದೆ.

ಚೆನ್ನೈ (ನ.23): ಎರಡೆಲೆ ಚಿಹ್ನೆಗಾಗಿ ಹೋರಾಟ ಮಾಡಿದ್ದ ಎಐಎಡಿಎಂಕೆಗೆ ಹಿನ್ನಡೆಯಾಗಿದೆ. ಎರಡೆಲೆ ಚಿಹ್ನೆಯನ್ನು ಚುನಾವಣಾ ಆಯೋಗ ಓ ಪನ್ನೀರ್ ಸೆಲ್ವಂ ಬಣಕ್ಕೆ ನೀಡಿದೆ.

ಎರಡೆಲೆ ಚಿಹ್ನೆ ಪಡೆಯುವುದಕ್ಕಾಗಿ ಎಐಎಡಿಎಂಕೆ ಹಾಗೂ ಓಪಿಎಸ್ ಬಣದ ನಡುವೆ ಜಟಾಪಟಿ ನಡೆದಿತ್ತು. ಸಾಕಷ್ಟು ಹೋರಾಟದ ನಂತರ ಓಪಿಎಸ್ ಚಿಹ್ನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಚುನಾವಣಾ ಆಯೋಗ ನಮ್ಮ ಪರವಾಗಿ ತೀರ್ಪು ನೀಡಿದೆ. ನಮಗೆ ಸಂತೋಷವಾಗುತ್ತಿದೆ. ಇದೊಂದು ಉತ್ತಮವಾದ ತೀರ್ಪು. ಪಕ್ಷದ ಬಹುತೇಕರು ನಮಗೆ ಬೆಂಬಲಿಸಿದ್ದಾರೆ. ನಮ್ಮಲ್ಲಿ ಬಹುಮತವನ್ನು ಎಂದು ಸಾಬೀತುಪಡಿಸಲು ನಾವು ಅಫಿಡವಿಟ್ ಸಲ್ಲಿಸಿದ್ದೆವು. ಇದರ ಆಧಾರದ ಮೇಲೆ ಚುನಾವಣಾ ಆಯೋಗ ಎರಡೆಲೆ ಚಿಹ್ನೆಯನ್ನು ನಮಗೆ ನೀಡಿದೆ.