ಏರ್ ಇಂಡಿಯಾ ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆರೋಪದಲ್ಲಿ ಗಾಯಕ್ವಾಡ್, ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿದ್ದಾರೆ.

ನವದೆಹಲಿ (ಏ.07): ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್’ ಅವರ ಟಿಕೆಟ್ ಕಾಯ್ದಿರಿಸುವ ಪ್ರಯತ್ನವನ್ನು ಏರ್ ಇಂಡಿಯಾ ಮತ್ತೊಮ್ಮೆ ವಿಫಲಗೊಳಿಸಿದೆ.

ಏರ್ ಇಂಡಿಯಾ ಅಧಿಕಾರಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಆರೋಪದಲ್ಲಿ ಗಾಯಕ್ವಾಡ್, ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೊಳಗಾಗಿದ್ದಾರೆ. ನಿಷೇಧಕ್ಕೊಳಗಾದ ಬಳಿಕ ಟಿಕೆಟ್ ಬುಕ್ ಮಾಡುವ 7ನೇ ವಿಫಲ ಪ್ರಯತ್ನವಾಗಿದೆ.

ಇಂದು ಬೆಳಗ್ಗೆ 5 ಗಂಟೆಗೆ ದೆಹಲಿಯಿಂದ ಮುಂಬೈ ಹಾಗೂ ಮುಂಬೈಯಿಂದ ದೆಹಲಿಗೆ ರವೀಂದ್ರ ಗಾಯಕ್ವಾಡ್ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಲು ಪ್ರಯತ್ನಿಸಿದ್ದಾರೆ, ಆದರೆ ನಮ್ಮ ಟ್ರಾಕ್ರರ್ ವ್ಯವಸ್ಥೆ ಆ ಪ್ರಯತ್ನವನ್ನು ವಿಫಲಗೊಳಿಸಿದೆಯೆಂದು ಎಂದು ಮೂಲಗಳು ತಿಳಿಸಿವೆ.

ನಿಷೇಧಕ್ಕೊಳಗಾದ ಬಳಿಕ ಇಂಡಿಗೋ ಹಾಗೂ ಸ್ಪೈಸ್ ಜೆಟ್’ನಲ್ಲೂ ಟಿಕೆಟ್ ಕಾಯ್ದಿರಿಸಲು ಗಾಯಕ್ವಾಡ್ ಈ ಹಿಂದೆ ವಿಫಲ ಯತ್ನ ನಡೆಸಿದ್ದರು.