ಹಣಕಾಸು ಸಚಿವ ಅರುಣ್ ಜೇಟ್ಲಿ ಜೊತೆ ಆರ್’ಬಿಐ ಗವರ್ನರ್ ಪಟೇಲ್ ಸಭೆ

First Published 31, Mar 2018, 12:06 PM IST
Ahead of Monetary policy RBI Governor holds meeting with Jaitley
Highlights

ಆರ್’ಬಿಐ ಗವರ್ನರ್  ಊರ್ಜಿತ್ ಪಟೇಲ್, ಹಣಕಾಸು ಸಚಿವ ಅರುಣ್ ಜೇಟ್ಲಿ ಜೊತೆ ಸಭೆ ನಡೆಸಿದ್ದಾರೆ.

ನವದೆಹಲಿ : ಆರ್’ಬಿಐ ಗವರ್ನರ್  ಊರ್ಜಿತ್ ಪಟೇಲ್, ಹಣಕಾಸು ಸಚಿವ ಅರುಣ್ ಜೇಟ್ಲಿ ಜೊತೆ ಸಭೆ ನಡೆಸಿದ್ದಾರೆ.

ಈ ಇಬ್ಬರೂ ಕೂಡ  ಸಭೆಯಲ್ಲಿ ದೇಶದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿರಬಹುದು ಎಂದು ಹೇಳಲಾಗಿದೆ. ಆರ್ಥಿಕ ವರ್ಷದ ಮೊದಲ ವಾರದಲ್ಲಿ ಪಾಲಿಸಿಗಳ ಬಗ್ಗೆ ವಿಮರ್ಶೆಗಳು ನಡೆದಿರಬಹುದು ಎನ್ನಲಾಗಿದೆ.

ಗುರುವಾರವಷ್ಟೇ ಮೊದಲ ಸಭೆ ನಡೆದಿದ್ದು, ಈ ಬಗ್ಗೆ ಯಾವುದೇ ರೀತಿಯಾದ ಮಾಹಿತಿಯನ್ನೂ ಕೂಡ ಬಹಿರಂಗ ಪಡಿಸಿಲ್ಲ. ಇನ್ನು ಆರ್ಥಿಕ ಅಭಿವೃದ್ಧಿ, ಹಣದುಬ್ಬರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆಯೂ ಕೂಡ ಚರ್ಚೆ ನಡೆಸಿರಬಹುದು ಎನ್ನಲಾಗಿದೆ.

loader