ಸದ್ಯ ಸಾಗರ್ ಆಸ್ಪತ್ರೆಯಲ್ಲಿ ಶ್ರೀಧರ್​ ಚಿಕಿತ್ಸೆ ಪಡೆಯುತ್ತಿದ್ದು, ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನಾ ಶೂಟೌಟ್​ ಪ್ರಕರಣದ ಆರೋಪಿಗಳಾದ ಸೈಲೆಂಟ್ ಸುನಿಲ್​, ರೋಹಿತ್​​ ವಶಕ್ಕಾಗಿ ಪೊಲೀಸರು ಶ್ರೀಧರ್ ಅವರ ಮನೆಯನ್ನು ಶೋಧಿಸಿದ್ದರು.

ಬೆಂಗಳೂರು(ಫೆ.10): ರೌಡಿಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ ಆರೋಪದ ಮೇಲೆ ಬಂಧನ ಭೀತಿಯಲ್ಲಿದ್ದ ಅಗ್ನಿ ಶ್ರೀಧರ್​​​​ಗೆ ನಿರೀಕ್ಷಣಾ ಜಾಮೀನು ದೊರಕಿದೆ. ಇದರಿಂದ ಶ್ರೀಧರ್'ಗೆ ತಾತ್ಕಲಿಕ ರಿಲೀಫ್ ಸಿಕ್ಕಂತಾಗಿದೆ. ಹಿರಿಯ ವಕೀಲ ಸಿ ಹೆಚ್ ಹನುಮಂತರಾಯ ಅವರು ಅಗ್ನಿ ಶ್ರೀಧರ್ ಪರ ವಾದ ಮಂಡಿಸಿದ್ದು, 53ನೇ ಸೆಷನ್ಸ್ ನ್ಯಾಯಾಲಯದಿಂದ 15 ದಿನಗಳ ಕಾಲ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.

ಸದ್ಯ ಸಾಗರ್ ಆಸ್ಪತ್ರೆಯಲ್ಲಿ ಶ್ರೀಧರ್​ ಚಿಕಿತ್ಸೆ ಪಡೆಯುತ್ತಿದ್ದು, ಎಪಿಎಂಸಿ ಅಧ್ಯಕ್ಷ ಕಡಬಗೆರೆ ಸೀನಾ ಶೂಟೌಟ್​ ಪ್ರಕರಣದ ಆರೋಪಿಗಳಾದ ಸೈಲೆಂಟ್ ಸುನಿಲ್​, ರೋಹಿತ್​​ ವಶಕ್ಕಾಗಿ ಪೊಲೀಸರು ಶ್ರೀಧರ್ ಅವರ ಮನೆಯನ್ನು ಶೋಧಿಸಿದ್ದರು. ಈ

ಸಂದರ್ಭದಲ್ಲಿ ಪೊಲೀಸರೊಂದಿಗೆ ನಡೆದ ವಾಗ್ವಾದದಲ್ಲಿ ಶ್ರೀಧರ್'ಗೆ ಲಘು ಹೃದಯಾಘಾತವಾಗಿತ್ತು.